ಸುಳ್ಯ:ಹಳೆಗೇಟು ಬೆಟ್ಟಂಪಾಡಿಯ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ನೇಮೋತ್ಸವ ಮಾ.19ರಂದು ನಡೆಯಿತು. ರಾತ್ರಿ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಭಕ್ತರಿಂದ ದೈವಕ್ಕೆ ಹೂಮಾಲೆಯನ್ನು ಸಮರ್ಪಿಸಲಾಯಿತು. ನೆರೆದ ಭಕ್ತರನ್ನು ಸ್ವಾಮಿ ಕೊರಗಜ್ಜ ದೈವ ಹರಸಿತು. ನೂರಾರು ಮಂದಿ ಭಕ್ತರು ಆಗಮಿಸಿ ಸ್ವಾಮಿ ಕೊರಗಜ್ಜ ದೈವದ ದರ್ಶನ ಪಡೆದ ಹರಕೆ ಸಮರ್ಪಿಸಿದರು. ಸಂಜೆ 7ರಿಂದ

ಬೆಟ್ಟಂಪಾಡಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈಭವ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಅವರಿಂದ ಭಜನೆ ಕಾರ್ಯಕ್ರಮ ನಡೆಯುತು ರಾತ್ರಿ ವಿಠಲ ನಾಯಕ್ ಮತ್ತು ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ ನಡೆಯಿತು. ರಾತ್ರಿ ಧಾರ್ಮಿಕಸಭಾ ಕಾರ್ಯಕ್ರಮದ ಬಳಿಕ ನೇಮೋತ್ಸವ ನಡೆಯಿತು. ರಾತ್ರಿ ಆರಂಭಗೊಂಡ ನೇಮೋತ್ಸವ ಬೆಳಗ್ಗಿನ ಜಾವ ಸಂಪನ್ನಗೊಂಡಿತು.







