ಬೆಳ್ತಂಗಡಿ: ಸಿರೋ ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ಅವರು ನೇಮಕಗೊಂಡಿದ್ದಾರೆ.
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅಥಿವಂದನೀಯ ಲಾರೆನ್ಸ್ ಮುಕ್ಕುಯಿಯವರು ನಿವೃತ್ತರಾಗಲಿರುವ ಹಿನ್ನಲೆಯಲ್ಲಿ ನೂತನ ಧರ್ಮಾಧ್ಯಕ್ಷರ ನೇಮಕ ಮಾಡಲಾಗಿದೆ. ನೂತನ ಧರ್ಮಾಧ್ಯಕ್ಷರಾಗಿ
ಫಾ.ಜೇಮ್ಸ್ ಪಟ್ಟೇರಿಲ್ ಅವರ ಪಟ್ಟಾಭಿಷೇಕವು ನವೆಂಬರ್ 5 ರಂದು ನಡೆಯಲಿದೆ. ಧರ್ಮಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಳ್ತಂಗಡಿಗೆ ಆಗಮಿಸಿದ ಜೇಮ್ಸ್ ಪಟ್ಟೇರಿಲ್ ಅವರನ್ನು
ಬೆಳ್ತಂಗಡಿ ಧರ್ಮಪ್ರಾಂತ್ಯದ ಕತೀಡ್ರಲ್ ಚರ್ಚ್ನಲ್ಲಿ ಸ್ವಾಗತಿಸಲಾಯಿತು.

ಫಾ.ಜೇಮ್ಸ್ ಪಟ್ಟೇರಿಲ್
ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿಯವರೊಂದಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರಿಗೆ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸ್ ವಲಿಯಪರಂಬಿಲ್, ಫಾ, ಲಾರೆನ್ಸ್, ಫಾ ಅಬ್ರಹಾಂ ಪಟ್ಟೇರಿಲ್, ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು, ಧರ್ಮ ಭಗಿನಿಯಯರು ಕ್ರೈಸ್ತ ಭಾಂದವರು ಸೇರಿ ಸ್ವಾಗತಿಸಿದರು. ಬಳಿಕ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ನಡೆದ ಸಮಾರಂಭದಲ್ಲಿ ನೂತನ ಧರ್ಮಾಧ್ಯಕ್ಷರನ್ನು ಅಭಿನಂದಿಸಲಾಯಿತು.












