ಬೆಳ್ಳೂರು: ಅಯೋಧ್ಯೆಯ ಶ್ರೀರಾಮದೇವರ ಪ್ರತಿಷ್ಠಾ ದಿನದಂದು ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ ಸಂಪನ್ನಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ, ಮಂತ್ರಾಲಯದ

ಆಹ್ವಾನಿತ ಗಾಯಕ, ದಾಸ ಸಂಕೀರ್ತನಕಾರ ಶ್ರೀ ಮಧ್ಯಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರ ಶಿಷ್ಯವೃಂದ ಹಾಗೂ ಊರ ಪರವೂರ ಭಕ್ತರ ಸಹಯೋಗದೊಂದಿಗೆ ಸಂಜೆ 6.19ಕ್ಕೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಜರುಗಿತು. ಬಳಿಕ ಶಂಖನಾದ ಹಾಗೂ ನೀಲೇಶ್ವರ ಗಂಗಾಧರ ಮಾರಾರ್ರಿಂದ ತಾಯಂಬಕ ಜರಗಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ಅಯೋಧ್ಯೆಯ ಶ್ರೀರಾಮದೇವರ ಪ್ರತಿಷ್ಠಾ ದಿನದಂದೇ ಲಕ್ಷ ದೀಪೋತ್ಸವವನ್ನು ಹಮ್ಮಿಕೊಂಡಿರುವುದರಿಂದ ಭಕ್ತರು ಭಕ್ತಿ ಭಾವಗಳೊಂದಿಗೆ ಶ್ರೀ ಕ್ಷೇತ್ರದಲ್ಲಿ ದೀಪಗಳನ್ನು ಬೆಳಗಿಸಿದರು.












