ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಿದರು. ಭಕ್ತಿ ಸಂಭ್ರಮದ ಮಧ್ಯೆ ನ.10ರಂದು ಪೂ.11ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ರಜತ ರಥ ಸಮರ್ಪಣೆ ಮಾಡಿದರು. ಡಾ.ರೇಣುಕಾ ಪ್ರಸಾದ್ ಕೆ.ವಿ. ಅವರ ಕುಟುಂಬದವರು, ಪ್ರಮುಖರು ಸೇರಿ
ಸಾವಿರಾರು ಮಂದಿ ಧನ್ಯ ಮುಹೂರ್ತಕ್ಕೆ ಸಾಕ್ಷಿಗಳಾದರು. ಸೇವಾ ರೂಪದಲ್ಲಿ ಅವರು ಬೆಳ್ಳಿ ರಥ ಸಮರ್ಪಿಸಿದರು.
ನ.10ರಂದು ಬೆಳಗ್ಗೆ 7ರಿಂದ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಸೇರಿದಂತೆ ವಿಶೇಷ ಪೂಜೆ ನಡೆದು ಪೂರ್ವಾಹ್ನ ಗಂಟೆ 11ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಯಿತು. ಇಂದು ರಾತ್ರಿ 8ರಂದು ಪ್ರಥಮ ಬೆಳ್ಳಿರಥ ಸೇವೆ ನೆರವೇರಿಸಲಾಗುತ್ತದೆ.
ನ.4ರಂದು ಕೋಟೇಶ್ವರದಿಂದ ಸುಳ್ಯಕ್ಕೆ ಆಗಮಿಸಿದ ರಥ ನ.5ರಂದು

ಅದ್ದೂರಿ ಮೆರವಣಿಗೆ ಮೂಲಕ ಸುಬ್ರಹ್ಮಣ್ಯಕ್ಕೆ ರಥ
ಆಗಮಿಸಿತು.ಬೆಳ್ಳಿರಥವನ್ನು ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮದ ಅಂಗವಾಗಿ ರವಿವಾರ ಸಂಜೆ ವಾಸ್ತು ರಕ್ಷೋಘ್ನ ಹೋಮ, ಶುದ್ಧಿ ಕಲಶ, ವಾಸ್ತು ಬಲಿ ಮತ್ತು ವಾಸ್ತು ಪೂಜೆ ಜರುಗಿತು. ಅರ್ಚಕರು ಪೂಜಾ ವಿಧಾನಗಳನ್ನು ನೆರವೇರಿಸಿದರು.ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್.ಕೆ.ವಿ., ಮನೆಯವರಾದ ಡಾ.ಜ್ಯೋತಿ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್ ಕುರುಂಜಿ, ಡಾ.ಅಭಿಜ್ಞಾ ಗೋಕುಲ್, ಗೋಕುಲ್, ದೇವಸ್ಥಾನದ

ಚಿತ್ರಗಳು:ಲೋಕೇಶ್ ಸುಬ್ರಹ್ಮಣ್ಯ. ಶಾಂತಲಾ ಸ್ಟುಡಿಯೋ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ,ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ , ಮಾಜಿ ವಿಧಾನ ಸಭಾಪತಿ ಕೆ ಜಿ ಬೋಪಯ್ಯ , ಮಾಜಿ ಶಾಸಕ ಸಂಜೀವ ಮಠಂದೂರು , ವಿನಯ್ ಗುರೂಜಿ,ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬೆಳಗಾವಿ ವಿಟಿಯು ರಿಜಿಸ್ಟ್ರಾರ್ ಉಜ್ವಲ್ ಯು ಜೆ, ರಥ ಶಿಲ್ಪಿ ರಾಜಗೋಪಾಲಾಚಾರ್ಯ, ಪ್ರಮುಖರಾದ

ನಿತ್ಯಾನಂದ ಮುಂಡೋಡಿ , ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ,ಜಾಕೆ ಮಾಧವ ಗೌಡ, ಪಿ.ಎಸ್. ಗಂಗಾಧರ , ಪಿ.ಸಿ ಜಯರಾಮ, ದಿನೇಶ್ ಮಡಪ್ಪಾಡಿ, ಪ್ರಸನ್ನ ಕಲ್ಲಾಜೆ , ಬಿ.ಟಿ ಮಾಧವ , ಅಣ್ಣಯ್ಯ , ಭವಾನಿಶಂಕರ ಅಡ್ತಲೆ, ದಿನೇಶ್ ಮಡ್ತಿಲ ,ಕಿರಣ್ ಬುಡ್ಲೆಗುತ್ತು , ಸಂತೋಷ್ ಜಾಕೆ , ಕಮಲಾಕ್ಷ ನಂಗಾರು , ಡಾ.ಸುರೇಶ್ , ಡಾ.ಮನೋಜ್ , ಯಶೋಧ ರಾಮಚಂದ್ರ , ಸುನೀಲ್ ಕೇರ್ಪಳ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ , ಡಾ.ರಘು, ಲೀಲಾಮನಮೋಹನ್, ಪ್ರವೀಣ ಮರುವಂಜ ಸೇರಿದಂತೆ ಸಮಿತಿ ಸದಸ್ಯರು ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸದಸ್ಯರು, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿಗಳು, ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿಗಳು, ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













