ಬೆಳ್ಳಾರೆ: 7 ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭದ ಎರಡನೇ ದಿನವಾದ ಜ.22ರಂದು ‘ಕೌಟುಂಬಿಕ ಜೀವನ ಇಸ್ಲಾಮಿನಲ್ಲಿ ‘ಎಂಬ ವಿಚಾರದ ಕುರಿತು ಧಾರ್ಮಿಕ ಪ್ರಭಾಷಣ ನಡೆಯಿತು. ಖ್ಯಾತ ವಾಗ್ಮಿ ಶಮೀರ್ ದಾರಿಮಿ ಕೊಲ್ಲಂ ಪ್ರಭಾಷಣ ನೀಡಿದರು.
ಅಸ್ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಿದರು.ಝಕರಿಯಾ ಜುಮಾ ಮಸೀದಿಯ

ಖತೀಬರಾದ ಮಹಮ್ಮದ್ ನವವಿ ಮುಂಡೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಲೈಮಾನ್ ಮುಸ್ಲಿಯಾರ್ ಬೆಳ್ಳಾರೆ ಸ್ವಾಗತಿಸಿದರು.
ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರಾದ
ಬರಮುಲ್ಲಾ ಷಾ ಜಿಸ್ತಿ ಅಲ್ಕಾದ್ರಿ, ಉಮ್ಮರ್ ಮುಸ್ಲಿಯಾರ್ ನಂಜೆ, ಸಂಶುದ್ದೀನ್ ಹನೀಫಿ ಮರ್ಧಾಳ, ಶಾಕಿರ್ ಹುದವಿ ಮಾಡನ್ನೂರ್, ಬೆಳ್ಳಾರೆ ಎಚ್.ಐ.ಎಂ ಸಹ ಅಧ್ಯಾಪಕರಾದ ಮುಹಮ್ಮದ್ ರಫೀಕ್ ಹನೀಫಿ, ತಮೀಂ ಅನ್ಸಾರಿ, ಪ್ರಮುಖರಾದ ಅಲಿ ಉಸ್ತಾದ್, ಎಲ್.ಟಿ.ರಝಾಕ್ ಹಾಜಿ ಪುತ್ತೂರು, ಹಸೈನಾರ್ ಸಂತೋಷ್, ಹಿರಾ ಅಬ್ದುಲ್ ಖಾದರ್ ಹಾಜಿ, ಕೆ.ಕೆ.ಇಬ್ರಾಹಿಂ ಹಾಜಿ, ಹಮೀದ್ ಎಂ.ಎಸ್.ಪುಣಚ, ಇಸ್ಮಾಯಿಲ್ ಕಳಂಜ, ಎ.ಕೆ.ಜಮಾಲ್ ಕಳಂಜ ಅತಿಥಿಗಳಾಗಿ ಭಾಗವಹಿಸಿದ್ದರು.

ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು. ಹೆಚ್ ಅಬೂಬಕ್ಕರ್ ಹಾಜಿ ಮಂಗಳ, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ ಬಿಝ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ ನಿಡ್ಮಾರ್,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.












