ಬೆಳ್ಳಾರೆ: 7 ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭದ 4 ನೇ ದಿಮವಾದ ದಿನವಾದ ಜ.24ರಂದು ಸಂಜೆ ನೂರೇ ಮಜ್ಲಿಸ್ ಆತ್ಮೀಯ ಮಜ್ಲಿಸ್ ನಡೆಯಲಿದೆ. ಕೋಝಿಕೋಡ್ ಖಾಜಿ ಅಸ್ಸಯ್ಯದ್ ಮಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ದುವಾ ನೆರವೇರಿಸುವರು. ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವ ವಹಿಸುವರು. ಜ.23 ರಂದು ಸಂಜೆ ನಡೆದ
ಕಾರ್ಯಕ್ರಮದಲ್ಲಿ ‘ಆತ್ಮ ಸಂಸ್ಕರಣೆ’ ಎಂಬ ವಿಷಯದಲ್ಲಿ ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಿದರು. ಅಸ್ಸಯ್ಯದ್ ಅಶ್ರಫ್ ತಂಙಳ್ ಆದೂರು ದುವಾ ನೆರವೇರಿಸಿದರು. ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ಸ್ವಾಗತಿಸಿದರು. ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಅಬ್ದುಲ್ ಹಮೀದ್ ಮಾಡಾವು, ಇಸ್ಮಾಯಿಲ್ ಹಾಜಿ, ಖಾದರ್ ಉಸ್ತಾದ್ ಮಾಡನ್ನೂರ್, ಅಬೂಬಕ್ಕರ್ ಅಡ್ಕಾರ್, ಯಾಕೂಬ್ ಮುಲಾರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.

ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು. ಹೆಚ್ ಅಬೂಬಕ್ಕರ್ ಹಾಜಿ ಮಂಗಳ, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ ಬಿಝ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ ನಿಡ್ಮಾರ್,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.











