ಬೆಳ್ಳಾರೆ:ಸುಳ್ಯದ ಕೃಷಿ ಇಲಾಖೆಯ ವತಿಯಿಂದ, ಸುಳ್ಯ ರೈತ ಉತ್ಪಾದಕ ಕಂಪನಿ ಹಾಗೂ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಸಹಯೋಗದೊಂದಿಗೆ ರೈತರಿಗೆ ಆಯೋಜಿಸಲಾದ ಮಣ್ಣು ಪರೀಕ್ಷೆಯ ಅವಶ್ಯಕತೆ ಮತ್ತು ವಿಧಾನದ ಕುರಿತು ಹಾಗೂ ಆರೋಗ್ಯ ಚೀಟಿ ವಿತರಣಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು. ಮಣ್ಣು ಪರೀಕ್ಷೆಯ ಅವಶ್ಯಕತೆ
ಮತ್ತು ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನದ ಕುರಿತು ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಮಾತನಾಡಿದರು.
ಸುಶ್ಮಿತಾ ವಿಕಾಸ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಇವರು ಬೆಳೆ ವಿಮೆಯ ಕುರಿತು ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ನ ಆಪ್ತ ಸಮಾಲೋಚಿಕಿ ಸುಜಾತ ಬ್ಯಾಂಕಿಂಗ್ನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮತ್ತು ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಕೃಷಿ ಇಲಾಖೆಯಿಂದ ರೈತರಿಗೆ ಮಣ್ಣು ಪರೀಕ್ಷೆಯ ” ಮಣ್ಣು ಆರೋಗ್ಯ” ಚೀಟಿಯನ್ನು
ವಿತರಿಸಲಾಯಿತು.ಸುಳ್ಯ ರೈತ ಉತ್ಪಾದಕ ಕಂಪನಿ ಇದರ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳ್ಳಾರೆ ಕೃಷಿ ಪತ್ತಿನ ಸಹಕಾರಿ ಸಂಘ ದ ಅಧ್ಯಕ್ಷರಾದ ಶ್ರೀರಾಮ ಪಾಟಾಜೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಜನ್ಯ ರೈತ ಉತ್ಪಾದಕ ಕಂಪೆನಿಯ ಸಿಇಒ ರಾಜೇಶ್ ಮುಖ್ಯ ಅತಿಥಿಗಳಾಗಿದ್ದರು. ಸುಳ್ಯ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಹರೀಶ ಕೆ ಮತ್ತು ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ನಂದಿತಾ ಕಾರ್ಯಕ್ರಮ ನಿರೂಪಿಸಿದರು.