ಬೆಳ್ಳಾರೆ: ಬೆಳ್ಳಾರೆಯಲ್ಲಿ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ದರ್ಶನದ ಮೆರವಣಿಗೆಯ ವೇಳೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಮೆರವಣಿಗೆ ಸಾಗಿ ಹೋದ ಬಳಿಕ ಬೆಳ್ಳಾರೆಯಲ್ಲಿ ಉದ್ರಿಕ್ತರಾದ ಕಾರ್ಯಕರ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್
ನಡೆಸಿದ್ದಾರೆ.ಈ ಸಂದರ್ಭದಲ್ಲಿ ಕೆಲವು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಬಂದ
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್, ಸಚಿವರಾದ ಸುನೀಲ್ ಕುಮಾರ್, ಎಸ್.ಅಂಗಾರ ಮತ್ತಿತರ ಮುಖಂಡರಿಗೆ ಕಾರ್ಯಕರ್ತರು ಘೆರಾವು ಹಾಕಿ ದಿಗ್ಬಂಧನ ವಿಧಿಸಿದರು.ಮುಖಂಡರಿಗೆ ಮಾತನಾಡಲು ಅವಕಾಶ ನೀಡದ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡು ಧಿಕ್ಕಾರ ಕೂಗಿದರು. ಸುಮಾರು ಒಂದು ಗಂಟೆಗಳ ಕಾಲ ದಿಗ್ಬಂಧನ ಮುಂದುವರಿದ ಬಳಿಕ ಪೊಲೀಸರು ಹರ ಸಾಹಸಪಟ್ಟು ಸಚಿವರ, ಸಂಸದರ ಕಾರಿಗೆ ತೆರಳಲು ಅವಕಾಶ ಮಾಡಿ ಕೊಟ್ಟರು.