ಬೆಳ್ಳಾರೆ: ಸುಳ್ಯ-ಪೈಚಾರು-ಬೆಳ್ಳಾರೆ- ದಿಡುಪೆ ರಾಜ್ಯ ಹೆದ್ದಾರಿ 276ರಲ್ಲಿ ಕಿ.8.30ರಿಂದ 11 ಕಿ.ಮಿ. ಅಂದರೆ ಬೆಳ್ಳಾರೆಯಿಂದ ದರ್ಖಾಸ್ತು ತನಕ ರಸ್ತೆ ಅಗಲೀಕರಣ ಮತ್ತು ಡಾಮರೀಕರಣಕ್ಕೆ ಗುದ್ದಲಿ ಪೂಜೆಯು ಡಿ.9ರಂದು ಬೆಳ್ಳಾರೆಯಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ
ರೂ.10 ಕೋಟಿ ವೆಚ್ಚದಲ್ಲಿ ರಸ್ತೆ ಮರು ನಿರ್ಮಾಣ ಆಗಲಿದೆ. ರಸ್ತೆ ಅಗಲೀಕರಣಗೊಂಡು ಮರು ನಿರ್ಮಾಣ ಆಗಲಿದೆ. ಎಸ್ಎಚ್ಡಿಪಿ ಯಡಿಯಲ್ಲಿ 10 ಕೋಟಿ ಅನುದಾನ ಮಂಜೂರಾಗಿದ್ದು ಬೆಳ್ಳಾರೆಯಿಂದ ದರ್ಖಾಸ್ ತನಕ ರಸ್ತೆ ಸಂಪೂರ್ಣ ಮರು ನಿರ್ಮಾಣ ಆಗಲಿದೆ. 7 ಮೀಟರ್ ಅಗಲದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಆಗಲಿದೆ. ಮೋರಿಗಳ ನಿರ್ಮಾಣ, ಆಯ್ದ ಭಾಗದಲ್ಲಿ ಚರಂಡಿ ನಿರ್ಮಾಣ, ರಸ್ತೆ ಸುರಕ್ಷಾ ಕಾಮಗಾರಿಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್.ರೈ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತು ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪದ್ಮನಾಭ ಬೀಡು,ಶ್ರೀನಾಥ್ ರೈ ಬಾಳಿಲ, ಗಂಗಾಧರ ರೈ ಪುಡ್ಕಜೆ, ದಿನೇಶ್ಚಂದ್ರ, ಭವ್ಯ , ಶೇಖರ ಮಡ್ತಿಲ,ಶಾಂತಾರಾಮ ಕಣಿಲೆಗುಂಡಿ, ಶ್ರೀಧರ ದೊಡ್ಡಮನೆ, ಪ್ರಭಾಕರ ಕುತ್ಯಾಡಿ, ನಂದಕುಮಾರ್ ಬಾರೆತ್ತಡ್ಕ,ಕಿಶನ್ ಜಬಳೆ,ಆರೀಫ್ ಬೆಳ್ಳಾರೆ, ಕುಶಾಲಪ್ಪ ಪೆರುವಾಜೆ,ಮಹಾಬಲ ಕಲ್ಲೋಣಿ,ಶ್ರೀಧರ್ ಬೆಳ್ಳಾರೆ,
ಲೋಕೊಪಯೋಗಿ ಎ.ಇ.ಇ.ಗೋಪಾಲ್, ಎ.ಇ. ಪರಮೇಶ್ವರ್, ಗುತ್ತಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.
ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ ಸ್ವಾಗತಿಸಿ,ವಂದಿಸಿದರು.