ಬೆಳ್ಳಾರೆ: 3 ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭಕ್ಕೆ ಜ.21ರಂದು ಸಂಭ್ರಮದ ಚಾಲನೆ ನೀಡಲಾಗಿದೆ. ಅಸ್ಸಯ್ಯದ್ ಝೈನುಲ್ ಅಭಿದೀನ್ ಜಿಫ್ರಿ ತಂಙಳ್ ಧ್ವಜಾರೋಹಣ ನೆರವೇರಿಸುವ ಮೂಲಕ 7 ದಿನಗಳ ಕಾಲ ನಡೆಯುವ ಉರೂಸ್ ಸಮಾರಂಭಕ್ಕೆ ಚಾಲನೆ ದೊರೆಯಿತು.
ಝಕರಿಯಾ ಜುಮಾ ಮಸೀದಿ ಖತೀಬರಾದ ಮಹಮ್ಮದ್ ನವವಿ ಮುಂಡೋಳೆ ದುವಾ ಆಶಿರ್ವಚನ ನೀಡಿದರು.ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು. ಹೆಚ್ ಅಬೂಬಕ್ಕರ್ ಹಾಜಿ ಮಂಗಳ ವಹಿಸಿದ್ದರು. ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಏಳು ದಿನಗಳ ಕಾಲ ನಡೆಯುವ ಊರೂಸ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ, ಅತ್ತಿಕರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ ನಿಡ್ಮಾರ್,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಝಕರಿಯಾ ಜುಮಾ ಮಸೀದಿಯ

ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ,ಬೆಳ್ಳಾರೆ ಹಿರಿಯ ಉದ್ಯಮಿ ಹಾಜಿ ಮಮ್ಮಾಲಿ ಹಾಜಿ,ಹಸೈನಾರ್ ಮುಸ್ಲಿಯಾರ್, ಸುಲೈಮಾನ್ ಮುಸ್ಲಿಯಾರ್, ಝೈನುದ್ದೀನ್ ಮುಸ್ಲಿಯಾರ್, ಯೂಸುಫ್ ಮುಸ್ಲಿಯಾರ್, ರಫೀಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ರಾತ್ರಿ ನಡೆದ ಉರೂಸ್ ಸಮಾರಂಭದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯದ್ ಆಲೀ ತಂಙಳ್ ಕುಂಬೋಳ್ ನೆರವೇರಿಸಿದರು. ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡಿದರು.













