ಸುಳ್ಯ:ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಉಂಟಾಗಿರುವುದನ್ನು ವಿರೋಧಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಡಿ.24ರಂದು ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಯೂತ್ ಪ್ರಮುಖ್ ಡಿ.ಕೆ ಅವಿನಾಶ್ ತಿಳಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ
ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಭಾರತ ರೈತ ರಾಷ್ಟ್ರವಾಗಿದ್ದು ದೇಶದ ಬೆನ್ನೆಲುಬು ಕೃಷಿ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ರೈತರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ.
ಬೆಳೆ ವಿಮೆ ಕಂತು ಪಾವತಿಸಿದ್ದರೂ ಬೆಳೆ ವಿಮೆ ಪರಿಹಾರವನ್ನು ಸರಿಯಾದ ರೀತಿಯಲ್ಲಿ ಜಮೆ ಮಾಡಿಲ್ಲ.ಈ ರೀತಿ ಕಡಿಮೆ ಮೊತ್ತ ಪಾವತಿಯಾಗಲು ಏನು ಕಾರಣ ಎಂದು ಸ್ಪಷ್ಟಪಡಿಸಬೆಕು ಮತ್ತು ನ್ಯಾಯಯುತವಾದ ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗಬೇಕು ಎಂದು ಆಗ್ರಹಿಸಿ ವೇದಿಕೆಯ ಸಂಚಾಲಕ ಕಿಶೋರ್ ಶೀರಾಡಿ ನೇತೃತ್ವದಲ್ಲಿ ಜಾತ್ಯಾತೀತ, ಪಕ್ಷಾತೀತವಾಗಿ ರೈತರ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವೇದಿಕೆಯ ಪ್ರಮುಖರಾದ ಎ.ಜಿ ಕರುಣಾಕರ, ಜಯರಾಮ ಭಾರದ್ವಾಜ್, ಸೋಮನಾಥ ಪೂಜಾರಿ ಉಪಸ್ಥಿತರಿದ್ದರು.













