ಬೆಂಗಳೂರು:ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೆಎಸ್ಆರ್ ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಇಂದು ಬೆಳಿಗ್ಗೆ 11.30 ಕ್ಕೆ ಹಸಿರು ನಿಶಾನೆ ತೋರಿದರು.ಈ ವೇಳೆ
ರೈಲನ್ನು ಅದ್ಧೂರಿಯಾಗಿ ಸಿಂಗರಿಸಲಾಗಿತ್ತು. ರೈಲಿನ ಒಳ ಹೋಗಿ ಪ್ರಯಾಣಿಕರು, ಮಕ್ಕಳೊಂದಿಗೆ ಮೋದಿ ಕೆಲಕಾಲ ಸಂವಾದ ಮಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಇವತ್ತಿನಿಂದ ಆರಂಭವಾದ ನಾಗ್ಪುರದ ಅಜ್ನಿ-ಪುಣೆ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೊ ದೇವಿ ಕಾತ್ರಾ ಮಧ್ಯೆ ನೂತನ ವಂದೇ ಭಾರತ್ ರೈಲುಗಳಿಗೂ ಬೆಂಗಳೂರಿನಿಂದಲೇ ಹಸಿರು ನಿಶಾನೆ ತೋರಿದರು.





