ಬೆಳಗಾವಿ: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರೋಡ್ ಶೋ ಮೂಲಕ ನಡೆಸಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದರು. 10.5 ಕಿ.ಮೀ ಉದ್ದದ ರೋಡ್ ಶೋನಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಜನ ಕಿಕ್ಕಿರಿದು ಸೇರಿದರು.ಜನರು ಮೋದಿ ಅವರ ಕಾರಿನ ಮೇಲೆ ಪುಷ್ಪವೃಷ್ಟಿ
ಮಾಡಿದರು. ಕಾರಿನ ಬಾಗಿಲು ತೆರೆದು ನಿಂತ ಪ್ರಧಾನಿ ಜನರತ್ತ ಕೈ ಬೀಸುತ್ತಲೇ ಸಾಗಿದರು. ಬೆಳಗಾವಿಯಲ್ಲಿ ರೈಲು ನಿಲ್ದಾಣ ಉದ್ಘಾಟನೆ, ಲೋಂಡಾ, ಬೆಳಗಾವಿ, ಫಟಪ್ರಭಾ ಮಾರ್ಗದ ಡಬ್ಲಿಂಗ್ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ವೇಳೆ ಮೆಗಾ ರೋಡ್ ಶೋ ನಡೆಸಿದ್ದಾರೆ.