ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ ಆಗಲಿದೆ ಬೆಳಗಾವಿಯಲ್ಲಿ ನಡೆಯುವ 12ನೇ ಅಧಿವೇಶನಕ್ಕೆಎಲ್ಲಾ ರೀತಿಯ ಸಿದ್ದತೆಗಳನ್ನ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣವಾಗಿ ಮಾಡಿಕೊಂಡಿದೆ. ಸುವರ್ಣ ವಿಧಾನಸೌಧದಲ್ಲಿ
ಸ್ವಚ್ಛತೆಯಿಂದ ಹಿಡಿದು ಲೈಟಿಂಗ್ ವ್ಯವಸ್ಥೆ, ಸಚಿವರಿಗೆ ಕೊಠಡಿ ಹಂಚಿಕೆ ಎಲ್ಲವೂ ಕೂಡ ಆಗಿದ್ದು ಇಂದು 11 ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ.
ಪ್ರತಿಪಕ್ಷ ನಾಯಕನಾಗಿ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕಗೊಂಡ ಬಳಿಕ ಉಭಯ ನಾಯಕರಿಗೂ ಮೊದಲ ಅಧಿವೇಶನ. ಬರಗಾಲ, ಗ್ಯಾರಂಟಿ ಅನುಷ್ಠಾನ, ವಿದ್ಯುತ್ ಬವಣೆ, ಹೀಗೆ ಹಲವು ವಿಷಯಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪವಾಗಿ ಕಾವೇರುವ ಸಾಧ್ಯತೆ ಇದೆ.












