ಸುಳ್ಯ: ಆರೋಗ್ಯ ಇಲಾಖೆಯ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ. ರಂಗಭೂಮಿಯ ಮೂಲಕ ಆರೋಗ್ಯ ಜಾಗೃತಿಯ ಕಿರು ಪ್ರಯತ್ನ ಇದು. ದ.ಕ.ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ಸಂಘಟನೆಗಾಗಿ ಸಾಮಾಜಿಕ ರಂಗಭೂಮಿ ಎಂಬ ಸಂದೇಶ ಸಾರುವ ಪುತ್ತೂರಿನ ಸಂಸಾರ ನಾಟಕ ತಂಡದ ಮೂಲಕ ಬೀದಿ ನಾಟಕದ ಮೂಲಕ

ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ಈಗ ಜಿಲ್ಲೆಯಾದ್ಯಂತ ನಡೆಯುತಿದೆ. ಸುಳ್ಯ ತಾಲೂಕಿನಲ್ಲಿಯೂ ವಿವಿಧ ಕಡೆಗಳಲ್ಲಿ ಆರೋಗ್ಯ ಜಾಗೃತಿಯ ಬೀದಿ ನಾಟಕ ಪ್ರದರ್ಶನಗೊಂಡಿತು. ಸಾಂಕ್ರಾಮಿಕ ರೋಗಗಳು ಅಸಂಕ್ರಾಮಿಕ ರೋಗಗಳು ಬಗ್ಗೆ ಜಾಗೃತಿ, ಕ್ಷೇಮ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ, ಜಾಗೃತಿ, ಇಲಾಖೆಗಳ ಮಾಹಿತಿಯನ್ನು ನಾಟಕದ ಮೂಲಕ ನೀಡಲಾಗುತ್ತದೆ. ಪತ್ರಕರ್ತ, ರಂಗಭೂಮಿ ನಿರ್ದೇಶಕ ಸಂಶುದ್ದೀನ್ ಸಂಪ್ಯ ನಿರ್ದೇಶನದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಟಕ ನಡೆಯುತಿದೆ. ಕಲಾವಿದರಾದ

ಕೃಷ್ಣಪ್ಪ ಬಂಬಿಲ, ಮಿಥುನ್ ಕುಮಾರ್ ಸೋನ, ಭವಾನಿ ಕಾಂಚನ ನೀನಾಸಂ, ಅರ್ಪಿತ ಕೇನಡ್ಕ, ವಿನೀತ್ ಕಾಟೂರು, ಯೋಗೀಶ ಬಳ್ಳಡ್ಕ, ಅಜಿತ್ ಕುಮಾರ್ ಉಚ್ಚಿಲ್ ತಂಡದಲ್ಲಿ ಭಾಗವಹಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ 4 ಕಡೆ ಬೀದಿ ನಾಟಕ ಪ್ರದರ್ಶನಗೊಂಡಿತು. ಅರಂತೋಡು ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಅರಂಬೂರು ಶಾಲೆಯಲ್ಲಿ ಹಾಗು ಕಾಂತಮಂಗಲ ಶಾಲೆಯಲ್ಲಿ, ಬೆಳ್ಳಾರೆ ಆರೋಗ್ಯ ಕೇಂದ್ರದ ಅಶ್ರಯದಲ್ಲಿ ಪೆರುವಾಜೆ ಶಿವರಾಮ ಕಾರಂತ ಕಾಲೇಜು ಹಾಗು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಆರೋಗ್ಯ ಜಾಗೃತಿ ಬೀದಿ ನಾಟಕ ನಡೆಯಿತು.