ಸುಳ್ಯ:ಗಾಂಧಿನಗರ ನಾವೂರು ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು ಸಾರ್ವಜನನಿಕರನ್ನು ಅಟ್ಟಾಡಿ ಕಚ್ಚುತಿದೆ. ನಾವೂರಿನ ಪವನ್ ಎಂಬ ಯುವಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ನಾಯಿ ಕಚ್ಚಿ ಯುವಕನ ಕೈಗೆ ತೀವ್ರ ತರಹದ ಗಾಯಗಳಾಗಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವೂರು ಸೇರಿದಂತೆ ಸುಳ್ಯ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಹುಚ್ಚು ನಾಯಿಗಳು
ಇರುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಆಗ್ರಹಿಸಿದ್ದಾರೆ. ಬೆಳಿಗ್ಗೆ ವಾಕಿಂಗ್ ಮಾಡುವವರು, ಶಾಲಾ ಮಕ್ಕಳು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಸುಳ್ಯ ನಗರ ವಿವಿಧ ಭಾಗಗಳಲ್ಲಿ ಗುಂಪಾಗಿ ತಿರುಗಾಡುವ ಬೀದಿ ನಾಯಿಗಳು ಸಾರ್ವಜನಿರಕನ್ನು, ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಕಚ್ಚುತಿದೆ. ದ್ವಿಚಕ್ರ ವಾಹನ ಸವಾರರನ್ನೂ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತಿದೆ. ಅಪಘಾತಕ್ಕೂ ಬೀದಿ ನಾಯಿಗಳು ಕಾರಣವಾಗುತಿದೆ ಎಂದು ಸಾರ್ವಜನಿರಕರು ಹೇಳಿದ್ದಾರೆ.














