ಕಲ್ಲಪಳ್ಳಿ: ಗಡಿಪ್ರದೇಶದ ಜನರ ಬಹುಕಾಲದ ಬೇಡಿಕೆಯಾದ
ಕಲ್ಲಪ್ಪಳ್ಳಿ-ಬಾಟೋಳಿ- ಪೆರುಮುಂಡ-ಕಮ್ಮಾಡಿ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಕೇರಳ ಸರಕಾರದ ಬಜೆಟ್ ಅನುದಾನ ಐದು ಕೋಟಿ ಮೊತ್ತದಲ್ಲಿ ಬಾಟೋಳಿಯಿಂದ ಕಮ್ಮಾಡಿ ತನಕ 4.5 ಕಿ.ಮಿ. ರಸ್ತೆ ಅಭಿವೃದ್ಧಿಯಾಗಲಿದೆ. 8 ಮೀಟರ್ ಅಗಲದ ರಸ್ತೆಯಲ್ಲಿ 3.80 ಮೀಟರ್

ಡಾಮರೀಕರಣ ನಡೆಯಲಿದೆ.ರಸ್ತೆಯಲ್ಲಿ ಹಂದಿಪಾರೆ ಎಂಬಲ್ಲಿ ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್ ಅವರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 98 ಲಕ್ಷ ಅನುದಾನದಲ್ಲಿ ಸೇತುವೆ ನಿರ್ಮಾಣ ಆಗಿದೆ. ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ನೆರವೇರಿಸಿದರು. ಉಪಾಧ್ಯಕ್ಷ ಪಿ.ಯಂ. ಕುರಿಯಾಕೋಸ್ ಅಧ್ಯಕ್ಷತೆ ವಹಿಸಿದ್ದರು.ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ,ಗ್ರಾಮ ಪಂಚಾಯತ್‌ನ ಕಲ್ಲಪಳ್ಳಿ ವಾರ್ಡ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ, ಪಂಚಾಯತ್ ಕಾರ್ಯದರ್ಶಿ ಸುರೇಶ್ ಕುಮಾರ್, ಮಾಜಿ ಸದಸ್ಯರಾದ ನಳಿನಾಕ್ಷಿ ಯಂ.ಡಿ, ಲಿಸ್ಸಿ ಜಾನ್,
ಪ್ರಮುಖರಾದ ನಂದಕುಮಾರ್ ಬಾಟೋಳಿ, ಜಯಪ್ರಕಾಶ್ ಎನ್.ಕೆ, ಚಿದಾನಂದ ಗರುಗುಂಜ, ಜಯಪ್ರಕಾಶ್ ಪೆರುಮುಂಡ, ಮಹೇಶ್ ಗರುಗುಂಜ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ ಸ್ವಾಗತಿಸಿದರು.