ಸುಳ್ಯ:ನಮ್ಮ ಮುಂದಿನ ಪೀಳಿಗೆಗೆ ಬಂಟ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಬಾರ್ಕೂರು ಮಹಾಸಂಸ್ಥಾನದ ಪಿಠಾಧಿಪತಿಗಳಾದ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಹೇಳಿದರು.ಸುಳ್ಯದ ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ನಡೆದ
ಬಂಟರ ವಾರ್ಷಿಕ ಸಮಾವೇಶ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಯುವ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಮಾವೇಶ ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಎಂದರು.
ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ ರೈ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರವೀಣ ರೈ ಮರುವಂಜ, ಬಂಟರ ನಗರ ಘಟಕದ ಅಧ್ಯಕ್ಷ ದಯಾಕರ ನಾವೂರು, ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ರೈ, ಮಹಿಳಾ ಘಟಕದ ಕಾರ್ಯದರ್ಶಿ ಉಷಾಲತಾ ಬಿ ರೈ, ಕೋಶಾಧಿಕಾರಿ ಶರ್ಮಿಳಾ ವಿ ರೈ, ಬೆಳ್ಳಾರೆ ವಲಯದ ಅಧ್ಯಕ್ಷ ಕರುಣಾಕರ ಆಳ್ವ, ಜಾಲ್ಸೂರು ವಲಯ ಅಧ್ಯಕ್ಷ ಶಿವರಾಮ ರೈ, ಬಾಳಿಲ ವಲಯ ಅಧ್ಯಕ್ಷ ಕರುಣಾಕರ ರೈ, ಸುಬ್ರಹ್ಮಣ್ಯ ವಲಯ ಅಧ್ಯಕ್ಷ ಪದ್ಮನಾಭ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡ ತಳಿ ಅಭಿವೃದ್ಧಿ ಪಡಿಸುತ್ತಿರುವ ಆಳ್ವ ಫಾರ್ಮ್ಸ್ ಅಲೆಕ್ಕಾಡಿಯ ಅಕ್ಷಯ್ ಆಳ್ವ, ಪಿಯುಸಿಯಲ್ಲಿ ೬ನೇ ಬ್ಯಾಂಕ್ ಪಡೆದ ವೈಷ್ಣವಿ. ಡಿ. ಶೆಟ್ಟಿ, ರಾಜ್ಯ ಭಾರ ಎತ್ತುವ ಸ್ಪರ್ಧೆಯಲ್ಲಿ ೩ನೇ ಸ್ಥಾನ ಪಡೆದ ದಕ್ಷ ಆರ್ ಶೆಟ್ಟಿ, ಸಿ.ಎ. ಪರೀಕ್ಷೆಯಲ್ಲಿ ದೇಶದಲ್ಲಿ ೩೨ನೇ ಸ್ಥಾನ ಪಡೆದ ನಿಶ್ಚಲ್ ರೈ ಆರ್, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಪ್ರಸಿದ್ಧಿ ಮಾರ್ಲರನ್ನು ಯುವಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರವೀಣ ರೈ ಮರುವಂಜರನ್ನು ಗೌರವಿಸಲಾಯಿತು.
ಸುನಂದ ಶೆಟ್ಟಿ, ವಸಂತಿ ಶೆಟ್ಟಿ, ಬಾಲಕೃಷ್ಣ ರೈ ಪಾದೆಕಲ್ಲು, ವೇದಾ ಹೆಚ್ ಶೆಟ್ಟಿ, ವಸಂತಿ ಶೆಟ್ಟಿ, ರಮಾ ಪಿ ರೈ, ಉಮಾ ರೈ ಯುವ ಸಾಧಕರನ್ನು ಪರಿಚಯಿಸಿದರು. ಚಂದ್ರಾಕ್ಷಿ ಜೆ ರೈ ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ಸ್ವಾಗತಿಸಿದರು.ರೂಪಾ ಜೆ ರೈ ಹಾಗೂ ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

















