ಸುಳ್ಯ:ಬಂಟರ ಸಂಘ ಸುಳ್ಯ ದ ವತಿಯಿಂದ ಉಡುಪಿಯಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ಬಂಟ ಸಮಾಜದ ಸದಸ್ಯರ ಅಭಿನಂದನಾ ಕಾರ್ಯಕ್ರಮ ಜರಗಿತು.ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅಭಿನಂದಿಸಿ ನೆನಪಿನ ಕಾಣಿಕೆ ನೀಡಿದರು. ಡಿ 31 ರಂದು ಸುಳ್ಯ ದಲ್ಲಿ ನಡೆಯುವ
ಬಂಟರ ತಾಲ್ಲೂಕು ಸಮಾವೇಶ ದ ತಯಾರಿ ಬಗ್ಗೆ ಅಧ್ಯಕ್ಷರು ಮಾಹಿತಿ ನೀಡಿ, ಬಂಟ ಭವನ ಸಮಿತಿ ಮತ್ತು ಮಹಿಳಾ ಹಾಸ್ಟೆಲ್ಆಡಳಿತ ಸಮಿತಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಐತಪ್ಪ ರೈ ಅಜರಂಗಳ,ಪ್ರಧಾನ ಕಾರ್ಯದರ್ಶಿ ಸುಭಾಶ್ಚಚಂದ್ರ ರೈ, ಖಜಾಂಜಿ ಗಂಗಾಧರ ರೈ,ಬೆಳ್ಳಾರೆ ವಲಯಾಧ್ಯಕ್ಷ ಕರುಣಾಕರ ರೈ, ಆರಂತೋಡು ವಲಯಾಧ್ಯಕ್ಷ ಜೆ.ಕೆ.ರೈ, ದಯಕರ್ ರೈ ನಾವೂರು ಮಹಿಳಾಧ್ಯಕ್ಷೆ ಇಂದಿರಾ ರೈ, ಪ್ರಪುಲ್ಲ ರೈ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಪ್ರಕಾಶ್ ರೈ ಸ್ವಾಗತಿಸಿ ಸುಭಾಶ್ಚಂದ್ರ ರೈ ವಂದಿಸಿದರು.









