ಸುಳ್ಯ:ಬಂಟರು ಶಿಕ್ಷಣ, ಸಂಘಟನೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಸಂಘಟನೆ, ಆಡಳಿತ ಹಾಗೂ ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರು ಬಂಟ ಸಮುದಾಯ. ಸಮುದಾಯದ ಐಕ್ಯತೆ, ಪ್ರೀತಿ ಆತ್ಮವಿಶ್ವಾಶ ಇನ್ನಷ್ಟು ಹೆಚ್ಚಿಸಿ ಗಟ್ಟಿಯಾಗಿ ಮುಂದುವರಿಯಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಸುಳ್ಯ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಕೇರ್ಪಳ ಬಂಟದ ಭವನದಲ್ಲಿ ನಡೆದ ಬಂಟರ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಇಂದು ಸಂಘಟನೆ ಅನಿವಾರ್ಯ. ಸಂಘಟನಾತ್ಮಕವಾಗಿ ಬೆಳೆಯುವುದು ಅತೀ ಅಗತ್ಯ. ನಾನು ಎಂಬ

ಅಹಂಕಾರ ಇದ್ದಲ್ಲಿ ನಾರಾಯಣ ಇರುವುದಿಲ್ಲ. ನಾವು ಎಂಬ ಭಾವನೆ ಇದ್ದಲ್ಲಿ ಅಲ್ಲಿ ನಾರಾಯಣ ಅನುಗ್ರಹಿಸುತ್ತಾನೆ ಎಂದ ಅವರು ಬಂಟರು ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಿದೆ. ಬದುಕಿನುದ್ದಕ್ಕೂ ಉತ್ತಮ ಮತ್ತು ಆದರ್ಶ ಜೀವನ ಸಾಗಿಸಬೇಕು. ಸಂಸ್ಕೃತಿ ಉಳಿಯಲು ಸಂಸ್ಕಾರ ಬೇಕು ಎಂದ ಅವರು ಸನಾತನ ಸಂಸ್ಕೃತಿಯ ಉಳಿವು ಬಂಟರ ಕೈಯಲ್ಲಿದೆ ಎಂದರು. ರಾಮ ಎಂದರೆ ಧರ್ಮ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಧರ್ಮ, ಸಂಸ್ಕೃತಿಯ ಪುರುತ್ಥಾನ ಎಂದ ಅವರು ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಆಗಬೇಕು. ಮಕ್ಕಳಿಗೆ ಆಫ್ ಲೈನ್, ಆನ್ ಲೈನ್ ಎಂಬುದು ಗೊತ್ತಿದೆ. ಅವರಿಗೆ ಲೈಫ್ ಲೈನ್ ತಿಳಿಸುವ ಕೆಲಸ ನಾವು ಮಾಡಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ‘ಸಂಘಟನೆಯ ಮೂಲಕ ಶಕ್ತಿಯಾಗಿ ಬೆಳೆದು ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿ.ವಿ.ಯ ಡಾಕ್ಟರೇಟ್ ಪುರಸ್ಕೃತ ಡಾ.ಎ. ಸದಾನಂದ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ ಸನ್ಮಾನ ನೆರವೇರಿಸಿದರು. ನೂತನ ಶಾಸಕರಾಗಿ ಆಯ್ಕೆಯಾದ ಭಾಗೀರಥಿ ಮುರುಳ್ಯ ಅವರನ್ನು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ. ಬಿ. ಶೆಟ್ಟಿ ಸನ್ಮಾನಿಸಿದರು.

ವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೀತಾರಾಮ ರೈ ಸವಣೂರು, ಬೆಂಗಳೂರು ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು, ಸುಳ್ಯದ ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವ ಪುರಸ್ಕಾರ:
ಸಮಾರಂಭದಲ್ಲಿ ಯುವ ಸಾಧಕರಿಗೆ ಯುವ ಪುರಸ್ಕಾರ ನೀಡಲಾಯಿತು. ಯಕ್ಷಗಾನ ಕ್ಷೇತ್ರದ ಪ್ರಸಿದ್ದ ಯುವ ಭಾಗವತರಾದ ಧೀರಜ್ ರೈ ಸಂಪಾಜೆ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಕ್ರೀಡಾ ಕ್ಷೇತ್ರದ ದೇವಿಪ್ರಸಾದ್ ರೈ ಗೆಜ್ಜೆ ಕೇನ್ಯ, ಉದ್ಯಮ ಕ್ಷೇತ್ರದ ಸನತ್ ಕುಮಾರ್ ಆಳ್ವ ಸೋಣಂಗೇರಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ಸಂದೇಶ್ ರೈ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸನ್ಮಾನ:
ಜಾನಪದ ಕ್ರೀಡೆ ಕಂಬಳ ಕ್ಷೇತ್ರದ ಕುಂಟುಪುಣಿಗುತ್ತು ಪ್ರಮೋದ್ ಶೆಟ್ಟಿ, ಧಾರ್ಮಿಕ ಕ್ಷೇತ್ರದ ವಿಶ್ವನಾಥ ರೈ ಆರ್ಗುಡಿ, ಸಹಕಾರ ಕ್ಷೇತ್ರದ ರಾಮಕೃಷ್ಣ ರೈ ಮಾಲೆಂಗ್ರಿ, ಯಕ್ಷಗಾನ ಕ್ಷೇತ್ರದ ರಘುರಾಮ ರೈ ಅಂಕತಡ್ಕ, ಶಿಕ್ಷಣ ಕ್ಷೇತ್ರದಲ್ಲಿ ಉದಯ ಕುಮಾರ್ ರೈ ಬಾಳಿಲ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರದೀಪ್ ಕುಮಾರ್ ರೈ ಐಕಳಬಾವ, ಸಮಾಜ ಸೇವೆಯಲ್ಲಿ ಸುವರ್ಣ ರೈ ಕೊಂಕೊಣಿಮೂಲೆ ಕೊಡಿಯಾಲ, ಹೈನುಗಾರಿಕಾ ಕ್ಷೇತ್ರದಲ್ಲಿ ಗೀತಾ ಉದಯಕುಮಾರ್ ರೈ ಕುಕ್ಕುತ್ತಡಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನಡೆಯಿತು.

ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳಾದ ಗಂಗಾಧರ ರೈ, ಜೆ.ಕೆ.ರೈ, ಕರುಣಾಕರ ಶೆಟ್ಟಿ, ಕರುಣಾಕರ ಆಳ್ವ ಬೆಳ್ಳಾರೆ, ಶಿವರಾಮ ರೈ ಜಾಲ್ಸೂರು, ಇಂದಿರಾ ರೈ, ಕಮಲಾಕ್ಷಿ ವಿ ಶೆಟ್ಟಿ, ದಯಾಕರ ಶೆಟ್ಟಿ ನಾವೂರು, ಪದ್ಮನಾಭ ರೈ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶುಭಾಶ್ಚಂದ್ರ ರೈ ತೋಟ ವಂದಿಸಿದರು. ಉಷಾ ಸಿ ಶೆಟ್ಟಿ, ಸುಜಾತಾ ಹೆಚ್ ಶೆಟ್ಟಿ, ಮೀರಾ ಎಂ ರೈ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಅಪರಾಹ್ನ ಯಕ್ಷ-ಗಾನ-ನಾಟ್ಯ-ಹಾಸ್ಯ ವೈಭವ ನಡೆಯಿತು.










