ಸುಳ್ಯ:ಬಂಟರ ಯಾನೆ ನಾಡವರ ಸಂಘ ಸುಳ್ಯ ಇದರ ವತಿಯಿಂದ ಡಿ. 31ರಂದು ಸುಳ್ಯದ ಬಂಟರ ಭವನದಲ್ಲಿ ಬಂಟರ ಸಮಾವೇಶ, ಪ್ರತಿಭಾ ಪುರಸ್ಕಾರ, ಯುವ ಪುರಸ್ಕಾರ, ಶಾಸಕರು ಸೇರಿ ವಿವಿಧ ಸಾಧಕರಿಗೆ ಅಭಿನಂದನೆ ಮತ್ತು ವಾರ್ಷಿಕ ಮಹಾಸಭೆ ನಡೆಯಲಿದೆ. ಸಮಾವೇಶವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು
ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೀತಾರಾಮ ರೈ ಸವಣೂರು, ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದರುಗಳ ಗರಡಿಯ ಆಡಳಿದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ, ಬೆಂಗಳೂರು ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು, ಸುಳ್ಯದ ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕುವೆಂಪು ವಿ.ವಿ.ಯ ಡಾಕ್ಟರೇಟ್ ಪುರಸ್ಕೃತ ಡಾ.ಎ. ಸದಾನಂದ ಶೆಟ್ಟಿ ಇವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಇವರನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅಭಿನಂದಿಸಲಿದ್ದಾರೆ. ಅಲ್ಲದೇ ನೂತನ ಶಾಸಕರಾಗಿ ಆಯ್ಕೆಯಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ. ಬಿ. ಶೆಟ್ಟಿ ಸನ್ಮಾನಿಸಲಿದ್ದಾರೆ.
ನಂತರ ಯುವ ಸಾಧಕರಿಗೆ ಯುವ ಪುರಸ್ಕಾರ ನಡೆಯಲಿದ್ದು ಯಕ್ಷಗಾನ ಕ್ಷೇತ್ರದ ಪ್ರಸಿದ್ದ ಯುವ ಭಾಗವತರಾದ ಧೀರಜ್ ರೈ ಸಂಪಾಜೆ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಕ್ರೀಡಾ ಕ್ಷೇತ್ರದ ದೇವಿಪ್ರಸಾದ್ ರೈ ಗೆಜ್ಜೆ ಕೇನ್ಯ, ಉದ್ಯಮ ಕ್ಷೇತ್ರದ ಸನತ್ ಕುಮಾರ್ ಆಳ್ವ ಸೋಣಂಗೇರಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ಸಂದೇಶ್ ರೈ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಲ್ಲದೇ ಜಾನಪದ ಕ್ರೀಡೆ ಕಂಬಳ ಕ್ಷೇತ್ರದ ಕುಂಟುಪುಣಿಗುತ್ತು ಪ್ರಮೋದ್ ಶೆಟ್ಟಿ, ಧಾರ್ಮಿಕ ಕ್ಷೇತ್ರದ ವಿಶ್ವನಾಥ ರೈ ಆರ್ಗುಡಿ, ಸಹಕಾರ ಕ್ಷೇತ್ರದ ರಾಮಕೃಷ್ಣ ರೈ ಮಾಲೆಂಗ್ರಿ, ಯಕ್ಷಗಾನ ಕ್ಷೇತ್ರದ ರಘುರಾಮ ರೈ ಅಂಕತಡ್ಕ, ಕೃಷಿ ಕ್ಷೇತ್ರದಲ್ಲಿ ರಾಮದಾಸ ರೈ, ಶಿಕ್ಷಣ ಕ್ಷೇತ್ರದಲ್ಲಿ ಉದಯ ಕುಮಾರ್ ರೈ ಬಾಳಿಲ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರದೀಪ್ ಕುಮಾರ್ ರೈ ಐಕಳಬಾವ, ಸಮಾಜ ಸೇವೆಯಲ್ಲಿ ಸುವರ್ಣ ರೈ ಕೊಂಕೊಣಿಮೂಲೆ ಕೊಡಿಯಾಲ, ಹೈನುಗಾರಿಕೆಯಲ್ಲಿ ಗೀತಾ ಉದಯ ಕುಮಾರ್ ರೈ ಕುಕ್ಕುತ್ತಡಿ ಅವರನ್ನು ಸನ್ಮಾನಿಸಲಾಗುವುದು.
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ. ಅಪರಾಹ್ನ 2 ಗಂಟೆಯಿಂದ ಯಕ್ಷ-ಗಾನ-ನಾಟ್ಯ-ಹಾಸ್ಯ ವೈಭವ ನಡೆಯಲಿದೆ ಎಂದು ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ತಿಳಿಸಿದ್ದಾರೆ.









