ಸುಳ್ಯ: ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸುಳ್ಯ ತಾಲೂಕು ಬಂಟರ ಸಮಾವೇಶ ಡಿ 31 ರಂದು ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣವನ್ನು ಸಂಘದ ಅಧ್ಯಕ್ಷರಾದ ಎನ್. ಜಯಪ್ರಕಾಶ್ ರೈ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ
ವಿವರ ನೀಡಿದ ಅವರು ಎಲ್ಲಾ ಸದಸ್ಯರು ಸಕ್ರಿಯರಾಗಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದರು.
ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶುಭಾಶ್ಚಂದ್ರ ರೈ, ಖಜಾಂಜಿ ಗಂಗಾಧರ ರೈ, ಆರಂತೋಡು ವಲಯಾಧ್ಯಕ್ಷ ಜೆ ಕೆ ರೈ, ಬಾಳಿಲ ವಲಯಾಧ್ಯಕ್ಷ ಕರುಣಾಕರ ರೈ, ಪಂಜ ವಲಯಾಧ್ಯಕ್ಷ ಪದ್ಮಾನಾಭ ರೈ, ದಯಕರ ರೈ ನಾವೂರು, ಕುಸುಮಾಧರ ರೈ, ಕಮಲಾಕ್ಷಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುಭಾಶ್ಚಂದ್ರ ರೈ ಸ್ವಾಗತಿಸಿ ಮೀರಾ ಮುರಳೀಧರ ರೈ ವಂದಿಸಿದರು, ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.









