ಸುಳ್ಯ: ಸುಳ್ಯ ಖಾಸಗೀ ಬಸ್ ನಿಲ್ದಾಣದ ಬಳಿಯಲ್ಲಿ ಅಳವಡಿಸಲಾದ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಮತ್ತು ಚೆನ್ಮಕೇಶವ ಜಾತ್ರೋತ್ಸವಕ್ಕೆ ಶುಭ ಕೋರಿ ಅಳವಡಿಸಲಾದ ಬ್ಯಾನರ್ ಹರಿದು ಹಾನಿ ಮಾಡಿರುವ ಘಟನೆ ಖಂಡಿಸಿ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು. ಸುಳ್ಯದ ರಾಮ ಭಕ್ತರು, ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ಯಾನರ್ ಹರಿದ ಘಟನೆಯ ಬಗ್ಗೆ
ಕೂಲಂಕುಷ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವಿನಯಕುಮಾರ್ ಕಂದಡ್ಕ, ಎನ್.ಎ.ರಾಮಚಂದ್ರ, ಜಿ.ಜಿ.ನಾಯಕ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಮೂರು ದಿನಗಳಲ್ಲಿ ಆರೋಪಿಗಳನ್ನು ಬಂದಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಎಸ್ಐ ಈರಯ್ಯ ದೂಂತೂರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಬ್ಯಾನರ್ ಹರಿದವರನ್ನು ಪತ್ತೆ ಶೀಘ್ರ ಹಚ್ಚಲಾಗುವುದು ಎಂದು ಭರವಸೆ ನೀಡಿದರು.
ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಅನೂಪ್, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಭಜರಂಗದಳ ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ, ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ಪ್ರಮುಖರಾದ

ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ಡಾ. ಮನೋಜ್ ಅಡ್ಡಂತಡ್ಕ, ಶಶಿಕಲಾ ನೀರಬಿದಿರೆ, ಚಂದ್ರಶೇಖರ ಅಡ್ಪಂಗಾಯ, ಸುನಿಲ್ ಕೇರ್ಪಳ, ಕೇಶವ ನಾಯಕ್ ಸುಳ್ಯ ಪ್ರಬೋದ್ ಶೆಟ್ಟಿ ಮೇನಾಲ, ಸನತ್ ಚೊಕ್ಕಾಡಿ, ನಿಕೇಶ್ ಉಬರಡ್ಕ, ಚಿದಾನಂದ ವಿದ್ಯಾನಗರ, ಚನಿಯ ಕಲ್ತಡ್ಕ, ಅಶೋಕ್ ಅಡ್ಕಾರು, ಬಾಲಗೋಪಾಲ ಸೇರ್ಕಜೆ, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಪೂಜಿತಾ ಕೇರ್ಪಳ, ನವೀನ್ ಎಲಿಮಲೆ, ಪ್ರವೀಣ ರಾವ್, ಬುದ್ಧ ನಾಯ್ಕ್, ಗಿರೀಶ್ ಕಲ್ಲುಗದ್ದೆ, ಹರೀಶ್ ಬೂಡುಪನ್ನೆ ಮತ್ತಿತರರು ಭಾಗವಹಿಸಿದ್ದರು.









