ಸುಳ್ಯ:ಬೇಸಿಗೆ ರಜೆಯನ್ನು ವೈವಿಧ್ಯಮಯವಾಗಿ ಒಂದಷ್ಟು ಕ್ರಿಯಾಶೀಲತೆಯೊಂದಿಗೆ ಕಳೆಯಲು ಮಕ್ಕಳಿಗೆ ಬೇಸಿಗೆ ಶಿಬಿರಗಳು ಪೂರಕ. ಹಾಡು, ನೃತ್ಯ, ಸೃಜನಾತ್ಮಕ ಕಲಿಕೆಯೊಂದಿಗೆ ಕುಣಿದು ಕುಪ್ಪಳಿಸಿ ನಲಿದು ಸಂಭ್ರಮಿಸಲು ಬೇಸಿಗೆ ಶಿಬಿರ ವೇದಿಕೆಯನ್ನು ಒದಗಿಸುತ್ತದೆ. ಅದರಲ್ಲೂ ಸುಳ್ಯದಲ್ಲಿಯೇ ಅತ್ಯುತ್ತಮ ಬೇಸಿಗೆ ಶಿಬಿರ ಎಂಬ ಹೆಗ್ಗಳಿಕೆ ಪಡೆದಿರುವ ಶಿಬಿರ ಸುಳ್ಯದ ಸಾಂಸ್ಕೃತಿಕ ಮತ್ತು ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’. ಕಳೆದ ಹಲವು
ವರ್ಷಗಳಿಂದ ಆಕರ್ಷಕ ಮತ್ತು ವೈವಿಧ್ಯಮಯ ಶಿಬಿರ ನಡೆಸಿರುವ ರಂಗಮಯೂರಿಯ ಶಿಬಿರದ ಬಣ್ಣದ ಲೋಕ ಎಪ್ರಿಲ್ 9ರಿಂದ ತೆರೆದುಕೊಳ್ಳಲಿದೆ. ಎಪ್ರಿಲ್ 9 ರಿಂದ 17 ರ ತನಕ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಬಣ್ಣ ನಡೆಯಲಿದೆ. ಶಿಬಿರದ ನೋಂದಣಿ ಆರಂಭಗೊಂಡಿದೆ. ಎಪ್ರಿಲ್ 7ರ ತನಕ ನೋಂದಾವಣೆ ಮಾಡಿಕೊಳ್ಳಬಹಿದು. ಸೀಮಿತ ಸಂಖ್ಯೆ ಶಿಬಿರಾರ್ಥಿಗಳಿಗೆ ಅವಕಾಶ ಇದ್ದು ಮೊದಲು ನೋಂದಾವಣೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.
ರಾಜ್ಯದ ಹೆಸರಾಂತ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ದೇಸೀ ಕಲೆಗಳ ಅನಾವರಣಕ್ಕೆ ಶಿಬಿರ ಈ ಬಾರಿ ವಿಶೇಷ ಆದ್ಯತೆ ನೀಡಲಿದೆ. ಮರೆತು ಹೋದ ದೇಸೀ ಕಲೆಗಳನ್ನು ಶಿಬಿರದಲ್ಲಿ ಮಕ್ಕಳಿಗೆ ಪರಿಚಯಿಸಿ ಕಲಿಸಲಾಗುವುದು.ದೇಸೀ ಆಟಗಳು, ಜಾನಪದ ಹಾಡುಗಳು, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಕಲಿಸುವುದರ ಜೊತೆಗೆ ಮಕ್ಕಳಿಗೆ ರಂಗ ತರಬೇತಿ, ನಾಟಕ ರಚನೆ-ನಿರ್ಮಾಣ, ಜನಪದ ಹಾಡು, ನೃತ್ಯ ಕಲಿಸಲಾಗುತ್ತದೆ. ದೇಶಭಕ್ತಿಯ ಗಾನ, ಸಂವಿಧಾನ ಪಠಣದ ಜೊತೆಗೆ ಇತರ ಚಟುವಟಿಕೆಗಳು ಇರಲಿದೆ. ಒಟ್ಟಿನಲ್ಲಿ ಪ್ರತಿ ಕ್ಷಣವೂ ಕಲಿಕೆ, ಪ್ರತಿ ಗಳಿಗೆಯೂ ಖುಷಿಯ ನಗು ಹಂಚುವ ಮಕ್ಕಳ ಕನಸಿನ ಬಣ್ಣದ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ.
ಮಕ್ಕಳ ರಜೆಯ ಮಜಾಕ್ಕೆ ಖುಷಿಯ ನಗುವಿಗೆ ಕ್ಷಣಗಣನೆ ಶುರುವಾಗಿದೆ.
ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ. 7 ರಿಂದ 17 ವರ್ಷದವರೆಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶ ಇದೆ.
ಮತ್ತೆ ತಡವೇಕೆ..? ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಸಂಖ್ಯೆ 9611355496 ಸಂಪರ್ಕಿಸಿ ಅಥವಾ ಪೋಸ್ಟರ್ನಲ್ಲಿ ನಮುದಿಸಿದ ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ರಂಗಮಯೂರಿ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.
ಈ ಕೆಳಗಿನ ವಾಟ್ಸಾಪ್ 9611355496 ಸಂಖ್ಯೆಗೆ ಮೆಸೇಜ್ ಕಳುಹಿಸಿ ಬಣ್ಣ ಶಿಬಿರದ ಗ್ರೂಪ್ಗೆ ಸೇರಿ ಮಾಹಿತಿ ಪಡೆದುಕೊಳ್ಳಬಹುದು.