ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ಸವಾಲಿನ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದ್ದು ಭಾರತಕ್ಕೆ 257 ರನ್ ಗುರಿ ನೀಡಿದೆ. ಬಾಂಗ್ಲಾದೇಶ ಪರ ಆರಂಭಿಕರಾದ
ಲಿಟನ್ ದಾಸ್ ಹಾಗೂ ಟಾನ್ಸಿಡ್ ಹಸನ್ ಅರ್ಧ ಶತಕ ದಾಖಲಿಸಿದರು. ಲಿಟನ್ ದಾಸ್ 66 ರನ್ ಜಾಗೂ ಹಸನ್ 51 ರನ್ ಭಾರಿಸಿ ಉತ್ತಮ ಆರಂಭ ಒದಗಿಸಿದರು. ಇವರು ಮೊದಲ ವಿಕೆಟ್ಗೆ 93 ರನ್ ಜೊತೆಯಾಟ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಮುಸ್ಫೀಕರ್ ರಹೀಮ್ (38), ಮಹಮ್ಮದುಲ್ಲಾ (46) ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 250 ರನ್ ಗಡಿ ದಾಟಲು ನೆರವಾದರು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಿರಾಜ್, ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಪಡೆದರು. ಕುಲ್ದೀಪ್ ಯಾದವ್, ಶಾರ್ದೂಲ್ ಟಾಕೂರ್ ತಲಾ ಒಂದು ವಿಕೆಟ್ ಪಡೆದರು. ಹಾರ್ದಿಕರ ಪಾಂಡ್ಯ ಗಾಯಗೊಂಡು ಮರಳಿದ್ದು ಭಾರತದ ಬೌಲಿಂಗ್ಗೆ ಹಿನ್ನಡೆಯಾಯಿತು. ಕೇವಲ 3 ಬಾಲ್ ಎಸೆದಾಗ ಪಾಂಡ್ಯ ಕಾಲಿಗೆ ಗಾಯಗೊಂಡು ಮರಳಿದರು. ಉಳಿದ 3 ಬಾಲ್ಗಳನ್ನು ವಿರಾಟ್ ಕೊಹ್ಲಿ ಎಸೆದರು.