ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಬಾಂಗ್ಲಾದೇಶ 3 ವಿಕೆಟ್ ಗಳ ಗೆಲುವು ಸಾಧಿಸಿದೆ.
ಶ್ರೀಲಂಕಾ ನೀಡಿದ 280 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾ 41.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ಗೆಲುವು ದಾಖಲಿಸಿದೆ. ನಜ್ಮುಲ್ ಹಸೈನ್ ಶಾಂಟೋ 101 ಎಸೆತಗಳಲ್ಲಿ
12 ಬೌಂಡರಿ ಸಹಿತ 90 ರನ್ ಗಳಿಸಿದರು.ನಾಯಕ ಶಕೀಬ್ ಅಲ್ ಹಸನ್ 65 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್ ಸಹಿತ ಸ್ಟೋಟಕ 82 ರನ್ ಬಾರಿಸಿದರು. ಶ್ರೀಲಂಕಾ ಪರ ದಿಲ್ಶಾನ್ ಮದುಶಂಕ 3 ವಿಕೆಟ್ ಪಡೆದರೆ ಮಹೇಶ ತೀಕ್ಷಣ ಹಾಗೂ ಮಾಥ್ಯೂಸ್ ತಲಾ 2 ವಿಕೆಟ್ ಕಬಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರಿಲಂಕಾ 49.3 ಓವರ್ಗಳಳಲ್ಲಿ 279 ರನ್ಗೆ ಆಲ್ ಔಟ್ ಆಯಿತು. ಪರ ಚರಿತ್ ಅಸಲಂಕ 105 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 108 ರನ್ ಬಾರಿಸಿದರು. ಧನಂಜಯ ದನಂಜಯ ಡಿಸಿಲ್ವ34, ಪಾತುಮ್ ನಿಸಾಂಕ 41, ನಾಯಕ ಕುಸಾಲ್ ಮೆಂಡಿಸ್ 19 ರನ್, ಸದೀರ ಸಮರವಿಕ್ರಮ 41,ಮಹೇಶ ತೀಕ್ಷಣ 22 ರನ್ ಗಳಿಸಿದರು.
ಬಾಂಗ್ಲಾದೇಶ ಪರ ತಂಝಿಮ್ ಹಸನ್ 3 ವಿಕೆಟ್ ಪಡೆದರೆ ನಾಯಕ ಶಾಕಿಬ್ ಉಲ್ ಹಸನ್ , ಶರೀಫುಲ್ ಇಸ್ಲಾಂ 2 ವಿಕೆಟ್ ಪೆಡೆದುಕೊಂಡರು ಹಾಗೂ ಹಸನ್ ಮಿರಾಝ್ ಒಂದು ವಿಕೆಟ್ ಕಬಳಿಸಿದರು.









