ಚಿತ್ರ ವರದಿ:ದಯಾನಂದ ಕಡಬ.
ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಎರಡನೇ ದಿನವಾದ ಶನಿವಾರ ಮಹಿಳೆಯರ ಎರಡನೇ ಪಂದ್ಯದಲ್ಲಿ ನ್ಯಾಷನಲ್ಸ್ ಬೆಂಗಳೂರು ತಂಡ ಪಾಂಡಿಚೇರಿ ತಂಡವನ್ನು 34 – 18 ಅಂಕಗಳಿಂದ ಸೋಲಿಸಿತು.
ಬೆಂಗಳೂರು ತಂಡದ ಭರ್ಜರಿ ಆಟಕ್ಕೆ ಪಾಂಡಿಚೇರಿ ತಂಡ ಅಂಕ ಗಳಿಸಲು

ಪರದಾಟ ನಡೆಸಿತು. ಬೆಂಗಳೂರು ತಂಡದ ಆಟಗಾರರು ರೈಡ್ ಹಾಗೂ ಕ್ಯಾಚ್ ಮಾಡುವಲ್ಲಿ ಉತ್ತಮ ಪ್ರದರ್ಶನ ನೀಡಿ, ಪಾಂಡಿಚೇರಿ ತಂಡದ ದಾಳಿಯನ್ನು ಎದುರಿಸಿದರು. ಅಂತಿಮವಾಗಿ ಬೆಂಗಳೂರು ತಂಡ 34 ಹಾಗೂ ಪಾಂಡಿಚೇರಿ ತಂಡ 18 ಅಂಕ ಗಳಿಸಿದ್ದು, ಬೆಂಗಳೂರು ತಂಡ ಜಯ ಸಾಧಿಸಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.







