ಸುಳ್ಯ:ಜನಪದ ಕಂಬಳ ಕ್ರೀಡೆಯನ್ನು ವಿಶ್ವಕ್ಕೇ ಪರಿಚಯಿಸುವ ನಿಟ್ಟಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ನ.25,26ರಂದು ನಡೆಯಲಿದ್ದು, ನೂರಾರು ಪ್ರಶಸ್ತಿಯನ್ನು ಪಡೆದಿರುವ ಸುಳ್ಯದ
ಕಾಂತಮಂಗಲದ ಜಗದೀಶ್ ರಾವ್ ಅವರ ಕೋಣಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗುವುದು. ನ.24ರಂದು ಸಂಜೆ 3.30ಕ್ಕೆ ಸುಳ್ಯದ ರಥಬೀದಿಯಲ್ಲಿ ಕಂಬಳ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಕಂಬಳದ ಕೋಣಗಳನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಗುವುದು ಎಂದು ಕಂಬಳ ಉಳಿಸಿ ಹೋರಾಟ ಸಮಿತಿಯ ಸಂಚಾಲಕ
ಗೋಕುಲ್ ದಾಸ್ ಕೆ ತಿಳಿಸಿದ್ದಾರೆ.







