ಬಂದಡ್ಕ: ಬಂದಡ್ಕ ಕೋಟಕ್ಕಾಲ್ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ ಧೂಮಾವತಿ ಹಾಗೂ ಉಪದೈವಗಳ ನೇಮೋತ್ಸವವು ಮೇ. 11ರಂದು ಮತ್ತು ಮೇ.12 ರಂದು ನಡೆಯಲಿದೆ. ಬಂದಡ್ಕ ಕೋಟಕ್ಕಾಲ್ ಎಂಬಲ್ಲಿ ಕುಂಡಂಗೋಳಿ ಕುಟುಂಬಸ್ಥರು ಆರಾಧಿಸಿಕೊಂಡು ಬರುವ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ
ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ ಧೂಮಾವತಿ ಹಾಗೂ ಉಪದೈವಗಳ ನೇಮೋತ್ಸವವು ನಡೆಯಲಿರುವುದು. ಮೇ. 11ರಂದು ಶನಿವಾರ ಪೂರ್ವಾಹ್ನ ಉಗ್ರಾಣ ತುಂಬಿಸುವುದು. ರಾತ್ರಿ ಘಂಟೆ 8ಕ್ಕೆ ದೈವಗಳಿಗೆ ಕೂಡುವುದು. ರಾತ್ರಿ ಘಂಟೆ 11ಕ್ಕೆ ಪೊಟ್ಟನ್ ದೈವದ ನೃತ್ಯಕೋಲ. ಮೇ. 12ರಂದು ಪೂರ್ವಾಹ್ನ 4ಕ್ಕೆ ಕೊರತ್ತಿ ದೈವದ ನೃತ್ಯಕೋಲ, ಪೂರ್ವಾಹ್ನ ಘಂಟೆ 10:30ಕ್ಕೆ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ ಧೂಮಾವತಿ, ದೈವಗಳ ನೃತ್ಯಕೋಲ – ನಂತರ ಪ್ರಸಾದ ವಿತರಣೆ, ಅಪರಾಹ್ನ ಘಂಟೆ 1ಕ್ಕೆ ಅನ್ನ ಸಂತರ್ಪಣೆ,. ಸಂಜೆ ಘಂಟೆ 3 ಕ್ಕೆ ಗುಳಿಗ ದೈವದ ಕೋಲ ನಡೆಯಲಿರುವುದು.