ಬನಾರಿ:ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80ನೇ ವಾರ್ಷಿಕೋತ್ಸವ ಹಾಗೂ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಸಮಾರಂಭ ಆ.31ರಂದು ನಡೆಯಲಿದೆ. ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿ ಸಂಸ್ಕೃತಿ ಉತ್ಸವ, ವಾರ್ಷಿಕೋತ್ಸವ, ಕೀರಿಕ್ಕಾಡು ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳೊಂದಿಗೆ
ದಿನಪೂರ್ತಿ ಬನಾರಿಯ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ.ಅಪರಾಹ್ನ 2ರಿಂದ
ಸಭಾ ಕಾರ್ಯಕ್ರಮ, 80ನೆಯ ವಾರ್ಷಿಕೋತ್ಸವ ನಡೆಯಲಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸುವರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಖ್ಯಾತ ಅರ್ಥಧಾರಿ, ಬಹುಭಾಷಾ ವಿದ್ವಾಂಸ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಅವರಿಗೆ
ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅಭಿನಂದನಾ ಭಾಷಣ ಮಾಡುವರು.ಸಹಕಾರಿ ಧುರೀಣ ಊಜಂಪಾಡಿ ನಾರಾಯಣ ನ್ಯಾಕ್, ಸಾಮಾಜಿಕ ಕಾರ್ಯಕರ್ತರಾದ ಗೋಪಾಲ ಶೆಟ್ಟಿ ಅರಿಬೈಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಗಳು:
ಬೆಳಿಗ್ಗೆ 8.30ರಿಂದ ಗಣಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ 9.30 ರಿಂದ ಭಜನಾ ಸಂಕೀರ್ತನೆ – ಬನಾರಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮತ್ತು ವಾಗ್ದೇವಿ ಭಜನಾ ಮಂಡಳಿ ಕಾವು.
10.30 ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಮಹಿಳಾ
ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ – ಸಮರಸನ್ನಾಹ, ವೀರಅಭಿಮನ್ಯು
ಮಧ್ಯಾಹ್ನ 12 ರಿಂದ ಪ್ರತಿಭಾ ಪ್ರದರ್ಶನ, ಭರತನಾಟ್ಯ ಮತ್ತು ವಿವಿಧ ನೃತ್ಯಗಳು ಶಾಲಾ ವಿದ್ಯಾರ್ಥಿಗಳಿಂದ ಮತ್ತು ಇತರ ಸಾಮಾಜಿಕರಿಂದ
ಅಪರಾಹ್ನ 2 ರಿಂದ ಸಭಾ ಕಾರ್ಯಕ್ರಮ
ಅಪರಾಹ್ನ ಗಂಟೆ 4ರಿಂದ
ಯಕ್ಷಗಾನ ತಾಳಮದ್ದಳೆ – ಧುರವೀಳ್ಯ ಕರ್ಣಭೇದನ
ಅರ್ಥಧಾರಿಗಳು: ವಿದ್ವಾನ್ ಕೆರೆಕ್ಕೆ ಉಮಾಕಾಂತ ಭಟ್ಟ, ಡಾ. ಶ್ರೀಪತಿ ಕಲ್ಲೂರಾಯ, ವೆಂಕಟರಾಮ ಭಟ್ಟ ಸುಳ್ಯ, ಗಣರಾಜ ಕುಂಬ್ಳೆ, ಡಾ. ರಮಾನಂದ ಬನಾರಿ. ಗಂಟೆ 7-00 ರಿಂದ ಸಂಘದ ಉದಯೋನ್ಮುಖ ಕಲಾವಿದರಿಂದ
ಯಕ್ಷಗಾನ ಬಯಲಾಟ ನರಕಾಸುರ ವಧೆ
ನಿರ್ದೇಶನ – ನೃತ್ಯಗುರು ಸರೋಜಿನಿ ಬನಾರಿ
ರಾತ್ರಿ ಗಂಟೆ 8-15 ರಿಂದ ಸಂಘದ ಹಿರಿಯ ಕಲಾವಿದರಿಂದ
‘ಪಾರ್ಥ ಸತ್ವ ಪರೀಕ್ಷೆ’ ಯಕ್ಷಗಾನ ಬಯಲಾಟ ನಡೆಯಲಿದೆ
ಎಂದು ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ
ಅಧ್ಯಕ್ಷ ಡಾ.ರಮಾನಂದ ಬನಾರಿ ಹಾಗೂ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.