ಬನಾರಿ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ “ಶರದೇತು ಬಂಧ ಸುಭದ್ರ ಕಲ್ಯಾಣ” ಯಕ್ಷಗಾನ ತಾಳಮದ್ದಳೆಯು ಕಲ್ಲರ್ಪೆ ಶೇಖರ ಪಾಟಾಳಿ ಮತ್ತು ಮನೆಯವರಿಂದ ಸೇವಾರೂಪವಾಗಿ ಪ್ರಸ್ತುತಗೊಂಡಿತು. ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ
ಆರಂಭಗೊಂಡ ಈ ಕಲಾಕಾರ್ಯಕ್ರಮವು ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ಸಂಯೋಜನೆಯಲ್ಲಿ ಮುಂದುವರಿಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಡ್ವ ಶಂಕರ ನಾರಾಯಣ ಭಟ್ ದೇಲಂಪಾಡಿ ಮತ್ತು ನಿತೀಶ್ ಕುಮಾರ್ ಎಂಕಣ್ಣ ಮೂಲೆ ಹಾಡಿ ಜನಮೆಚ್ಚುಗೆ ಗಳಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಕಲ್ಲಡ್ಕ ಶಿವರಾಮ ಕಲ್ಲೂರಾಯ, ವಿಷ್ಣುಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಬಿ.ಎಚ್.ವೆಂಕಪ್ಪ ಗೌಡ ಮತ್ತು ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ಡಾ. ರಮಾನಂದ ಬನಾರಿ ಮಂಜೇಶ್ವರ, ನಾರಾಯಣ ದೇಲಂಪಾಡಿ,.ರಾಮಣ್ಣ ಮಾಸ್ತರ್ ದೇಲಂಪಾಡಿ, ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಕಲ್ಲಡ್ಕ ಗುತ್ತು ರಾಮಯ್ಯ ರೈ, ಬಾಲಕೃಷ್ಣ ಗೌಡ ದೇಲಂಪಾಡಿ, ಎಂ ರಮಾನಂದ ರೈ ದೇಲಂಪಾಡಿ, ರಾಮ ನಾಯ್ಕ ದೇಲಂಪಾಡಿ ಅವರು ಭಾಗವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.
ನಂದಕೀಶೋರ ಬನಾರಿ, ಗೋಪಾಲಕೃಷ್ಣ ರೈ ಮುದಿಯಾರು, ವಿಷ್ಣು ಕೀರ್ತಿ ಬನಾರಿ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಹಾಗೂ ಸಂಘದ ಎಲ್ಲಾ ಸದಸ್ಯರು ಸಹಕರಿಸಿದರು. ಕಲ್ಲರ್ಪೆ ರಮೇಶ್ ಪಾಟಾಳಿ ಸ್ವಾಗತಿಸಿದರು. ಕಾಸರಗೋಡಿನ ಅನಿಶ್ ಸಜಿತಾ ವಂದಿಸಿದರು.