ಬನಾರಿ:ದೇಲಂಪಾಡಿಯ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕ್ಕೀರಿಕ್ಕಾಡು ಸ್ಮಾರಕ ಅಧ್ಯಯನ ಕೇಂದ್ರ ಸಭಾ ಸದನದಲ್ಲಿ ಪಾರ್ಥಸಾರಥ್ಯ – ಗುರುನೀತಿ” ಯಕ್ಷಗಾನ ತಾಳಮದ್ದಳೆ ನೆರವೇರಿತು. ಸಂಘದ ಸದಸ್ಯ ದೇಲಂಪಾಡಿ ವೆಂಕಟ್ರಮಣ ಮಾಸ್ತರ್ ಹಾಗೂ ಮನೆಯವರ ಸೇವಾ ರೂಪವಾಗಿ ಆಯೋಜಿಸಲ್ಪಟ್ಟ ಈ ಕಲಾ ಕಾರ್ಯಕ್ರಮದ ಮೊದಲಿಗೆ
ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಿ ಪ್ರಾರ್ಥಿಸಲಾಯಿತು. ತದನಂತರ ನಡೆದ ಯಕ್ಷಗಾನ ತಾಳೆಮದ್ದಳೆಯಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ ಭಾಗವಹಿಸಿದ್ದರು. ಚೆಂಡೆ ಮದ್ದಳೆ ವಾದನದಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ಕಲ್ಲಡ್ಕ ಶಿವರಾಮ ಕಲ್ಲೂರಾಯ ,ವಿಷ್ಣು ಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ ಸಹಕರಿಸಿದರು.
ಅರ್ಥಧಾರಿಗಳಾಗಿ ಡಾಕ್ಟರ್ ರಮಾನಂದ ಬನಾರಿ ಮಂಜೇಶ್ವರ, ರಾಮಣ್ಣ ಮಾಸ್ತರ್ ದೇಲಂಪಾಡಿ,ನಾರಾಯಣ ದೇಲಂಪಾಡಿ,ಯಂ.ರಮಾನಂದ ರೈ ದೇಲಂಪಾಡಿ,ಮೋಹನ ಸುವರ್ಣ ಬೆಳ್ಳಿಪ್ಪಾಡಿ,ಪಧ್ಮನಾಭ ರಾವ್ ಮಯ್ಯಾಳ,ಐತ್ತಪ್ಪ ಗೌಡ ಮುದಿಯಾರು ಅವರು ತಮ್ಮ ಕಲಾಪ್ರತಿಭೆಯನ್ನು ತೋರಿಸಿಕೊಟ್ಟರು.ಹಿರಿಯ ಭಾಗವತ ಗುರುಗಳಾದ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಮುನ್ನಡೆದ ಈ ತಾಳಮದ್ದಳೆಯ ಆರಂಭದಲ್ಲಿ ನಂದಕಿಶೋರ ಬನಾರಿ ಸ್ವಾಗತಿಸಿದರು.ಮುಂದಿನ ಜುಲೈ ತಿಂಗಳ ಕಲಾ ಸೇವೆಯು ಪ್ರಭಾಕರ ಆಚಾರ್ಯ ಈಶ್ವರಮಂಗಲ ಅವರಿಂದ ಎಂದು ನಿಶ್ಚಯಿಸಲಾಯಿತು. ಕೇಶವ ಶೌರಿ ವಂದಿಸಿದರು.