ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವತಿಯಿಂದ ತೆಂಕುತಿಟ್ಟಿನ ಹಿರಿಯ ಕಲಾವಿದ ಯಕ್ಷಗಾನ ಪಾತ್ರಧಾರಿ ಕೀರ್ತಿ ಶೇಷ ಕಿರಿಕ್ಕಾಡು ಸುಬ್ರಮಣ್ಯ ಭಟ್ ಅವರ ಸಂಸ್ಮರಣೆ, ಕಲಾರಾಧಾನೆ ಹಾಗೂ ಯಕ್ಷಗಾನ ತಾಳಮದ್ದಳೆ ಸಂಘದ ಕೀರಿಕ್ಕಾಡು ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ನಡೆಯಿತು. ಸ್ಥಳ ಸಾನ್ನಿಧ್ಯ ಶ್ರೀ
ಗೋಪಾಲಕೃಷ್ಣ ದೇವರ ಪೂಜೆಯು ಭಗವದ್ಗೀತಾ ಪಾರಾಯಣದೊಂದಿಗೆ ನಡೆಯಿತು. ಕಲಾಸಂಘದ ಅಧ್ಯಕ್ಷರಾದ ಡಾ.ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟ್ರಮಣ ಮಾಸ್ಟರ್ ದೇಲಂಪಾಡಿ ಸಂಸ್ಮರಣಾ ಭಾಷಣ ಮಾಡಿದರು.ರಾಮಣ್ಣ ಮಾಸ್ಟರ್ ದೇಲಂಪಾಡಿ ಸ್ವಾಗತಿಸಿ, ಸಂಯೋಜಕರಾದ ನಾರಾಯಣ ಭಟ್ ಬಾಳಿಲ ವಂದಿಸಿದರು. ಪೃಥ್ವಿ ಈಶ್ವರಿ ಪ್ರಾರ್ಥಿಸಿದರು.

ಬಳಿಕ ಕಲಾ ಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ‘ಕರ್ಣಾರ್ಜುನ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮೋಹನ್ ಮೆಣಸಿನಕಾನ,ನಿತೀಶ್ ಕುಮಾರ್ ಎಂಕ್ಕಣ್ಣಮೂಲೆ, ನಾದ್ಯಕೃಷ್ಣ ಈಶ್ವರಮಂಗಲ ಭಾಗವಹಿಸಿದ್ದರು. ಕುಮಾರ ಸುಬ್ರಹ್ಮಣ್ಯ ವಳಕುಂಜ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ನಾರಾಯಣ ಪಾಟಾಳಿ ಮಯ್ಯಾಳ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಬಿ.ಎಚ್.ವೆಂಕಪ್ಪ ಗೌಡ ಚೆಂಡೆ, ಮದ್ದಳೆ, ಚಕ್ರ ತಾಳ ನುಡಿಸಿದರು. ಅರ್ಥಧಾರಿಗಳಾಗಿ ಡಾ.ರಮಾನಂದ ಬನಾರಿ ಮಂಜೇಶ್ವರ, ವೆಂಕಟೇಶ್ ಕುಮಾರ್ ಉಳುವಾನ ಡಾ. ಸೂರ್ಯನಾರಾಯಣ ಕಿರಿಕ್ಕಾಡು, ಡಿ.ವೆಂಕಟ್ರಮಣ ಮಾಸ್ಟರ್ ದೇಲಂಪಾಡಿ, ರಾಮಣ್ಣ ಮಾಸ್ಟರ್ ದೇಲಂಪಾಡಿ, ರಮಾನಂದ ರೈ, ದೇಲಂಪಾಡಿ, ಸಂಜೀವ ರಾವ್ ಮಯ್ಯಾಳ ಅರ್ಥ ನಿರೂಪಣೆ ಮಾಡಿದರು.ನಂದ ಕಿಶೋರ ಬನಾರಿ ವಂದಿಸಿದರು.





