ಕಾವು:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಪ್ರಕಾಶನ ದೇಲಂಪಾಡಿ ಇವರ ಆಶ್ರಯದಲ್ಲಿ ತುಡರ್ ಯುವಕ ಮಂಡಲ ಕಾವು ಇವರ ಸಹಯೋಗದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ ಮನಮೋಹನ ಬನಾರಿ ಅವರು ರಚಿಸಿದ “ನ್ಯಾಯಧೀಶರ ನೆನಪುಗಳು” ಕೃತಿ ಬಿಡುಗಡೆ ಕಾರ್ಯಕ್ರಮ
ಅ.30 ರಂದು ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ಅ. 3.30ಕ್ಕೆ ನಡೆಯಲಿದೆ. ಹನುಮಗಿರಿ ಶ್ರೀಗಜಾನನ ವಿದ್ಯಾಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಕೃತಿ ಬಿಡುಗಡೆಗೊಳಿಸುವರು. ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಕುಕ್ಕಜೆ ರಾಮಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸುವರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಪ್ರಸ್ತಾವನೆಗೈಯುವರು. ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಮಾಧವ ಭಟ್ ಪುಸ್ತಕ ಅವಲೋಕನ ಮಾಡುವರು. ನಿವೃತ್ತ ಜಿಲ್ಲಾನ್ಯಾಯಾಧೀಶ ಕೆ ಮನಮೋಹನ ಬನಾರಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.