ಸುಳ್ಯ: ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ವತಿಯಿಂದ ಬಾಳುಗೋಡು ಅಂಗನವಾಡಿ ಮಕ್ಕಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧೀರ್ ದೇವ, ಉಪಾಧ್ಯಕ್ಷರು ಅಮರ ಸಂಘಟನಾ ಸಮಿತಿ ವಹಿಸಿದ್ದರು ಶುಭ ಕೆ ಪ್ರಭಾರ ಮುಖ್ಯೋಪಾಧ್ಯಾಯರು ಇವರು ಕಾರ್ಯಕ್ರಮವನ್ನು
ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಲಲಿತ ಬಿ ಅಧ್ಯಕ್ಷರು ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಬಾಳುಗೋಡು , ಹರ್ಷಿಣಿ ಕುಮಾರಿ ನಿರ್ದೇಶಕರು ಪಯಸ್ವಿನಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸುಳ್ಯ, ಶುಭಶ್ರೀ ಬಿ ಅಧ್ಯಕ್ಷರು ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಬಾಳುಗೋಡು, ತೀರ್ಥಕುಮಾರಿ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಕೇಂದ್ರ ಬಾಳುಗೋಡು ಇವರು ವಹಿಸಿ ಶುಭ ಹಾರೈಸಿದರು. ಜಯಪ್ರಸಾದ್ ಸಂಕೇಶ ಸ್ವಾಗತಿಸಿ, ಚೇತನ್ ಎಲಿಮಲೆ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿಯ ಸದಸ್ಯರಾದ ಶಿವಪ್ರಸಾದ್ ದೊಡ್ಡಿಹಿತ್ಲು, ಪ್ರಸಾದ್ ಬೊಳ್ಳೂರು, ಮನೀಶ್ ಕಡಪಳ, ಹರ್ಷೀತ್ ದಾತಡ್ಕ, ಬಾಲಕೃಷ್ಣ ಹೊನ್ನೆಕಡ್ಪು ,ಇವರುಗಳು ಉಪಸ್ಥಿತರಿದ್ದರು.





