ಬಳ್ಪ:ಕಡಬ ತಾಲೂಕಿನ ಬಳ್ಪ ಬುಡೆಂಗಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲವು ಎಪ್ರಿಲ್ ತಿಂಗಳ 27 ಮತ್ತು 28ರಂದು ನಡೆಯಲಿದೆ.ಇದರ
ಕೊಳ್ಳಿ ಮುಹೂರ್ತವು ಮಾ.7ರಂದು ಶನಿವಾರ ನಡೆಯಿತು. ಪ್ರಧಾನ ಪೂಜಾರಿಗಳಾದ ಉದಯಕುಮಾರ್ ಮಾವಿನಕಟ್ಟೆ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.ಬಳ್ಪ ಬುಡೆಂಗಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತೂರ್, ಉಪಾಧ್ಯಕ್ಷರಾದ

ಉಮೇಶ್ ಬುಡೆಂಗಿ, ನವೀನ್ ಪುಲ್ಲಡ್ಕ, ಕೋಶಾಧಿಕಾರಿ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಆಡಳಿತ ಮೊಕ್ತೇಸರರಾದ ಮೋನಪ್ಪ ಬೆಳ್ಚಪ್ಪಾಡ ಬುಡೆಂಗಿ,ಸುಂದರ ಬೆಳ್ಚಪ್ಪಾಡ ಬುಡೆಂಗಿ, ಪ್ರಮುಖರಾದ ರಾಧಾಕೃಷ್ಣ ಕುಳ, ಕಾರ್ತಿಕ್ ರೈ ಬುಡೆಂಗಿ, ಭಾಸ್ಕರ ಕೊರಪ್ಪಣೆ, ಚಂದ್ರಕಾಂತ್ ಬಳ್ಪ, ಗಿರಿಧರ ಬಿಕೆರೆ, ಪ್ರೇಮನಾಥ ರೈ ಬುಡೆಂಗಿ, ಹರೀಶ್ ಬಿಕೆರೆ, ರಮೇಶ್ ಆಚಾರ್ಯ ಬಿಕೆರೆ, ನೀಲೇಶ್ವರ ಬಿಕೆರೆ, ಸೀತಾರಾಮ ನಾಳ ಎಣ್ಣೆಮಜಲು, ಪವನ್ ಬಿಕೆರೆ, ನಾರಾಯಣ ಕೊರಪ್ಪಣೆ, ವಿಜಯ ಬುಡೆಂಗಿ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.










