ಬಳ್ಪ:ಬಳ್ಪ – ಕೇನ್ಯ ಗ್ರಾಮವನ್ನೊಳಗೊಂಡ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಬೀದಿಗುಡ್ಡೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಬಿಜೆಪಿ ಶಕ್ತಿಕೇಂದ್ರ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಚುನಾವಣೆ ಸಂದರ್ಭದಲ್ಲಿ ಪಕ್ಷದ
ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಭಾಗೀರಥಿ ಮುರುಳ್ಯ ಅಭಿನಂದನೆ ಸಲ್ಲಿಸಿದರು. ಸಂಸದರ ಆದರ್ಶ ಗ್ರಾಮವಾದ ಬಳ್ಪದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿದೆ. ಮುಂದೆಯೂ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಎ.ವಿ. ತೀರ್ಥರಾಮ, ಸುಬ್ರಹ್ಮಣ್ಯ ಕುಳ, ಭಾಸ್ಕರ ಗೌಡ ಪಂಡಿ, ಸೂರಪ್ಪ ಗೌಡ ಪಂಡಿ, ಪ್ರಕಾಶ್, ಸದಾನಂದ ಕಾರ್ಜ, ತಾರಾ ರೈ, ರಮಾನಂದ, ವಿನೋದ್ ಬೋಲ್ಮಲೆ, ಬೆಳ್ಯಪ್ಪ, ಹೊನ್ನಪ್ಪ ಗೌಡ, ಕಿಟ್ಟಣ ಪೂಜಾರಿ, ಹರ್ಷಿತ್ ಕಾರ್ಜ, ಹರೀಶ್ ಕಾರ್ಜ, ದೇವರಾಜ್, ಸುಂದರ ಗೌಡ ಕೇನ್ಯ, ವಾಸುದೇವ ಕೆರೆಕೋಡಿ, ಕಿರಣ್ ಕೋನಡ್ಕ, ಗಗನ್ ಕಟ್ರಮನೆ, ಬಾಲಕೃಷ್ಣ ರೈ ಬೆರ್ಕಿ, ಕಾರ್ತಿಕ್ ಕಣ್ಕಲ್, ಚಿದಾನಂದ ಕಲ್ಲೇರಿ, ಶಶಿಧರ ಪನ, ಅಭಿಲಾಷ್ ಕಟ್ಟ, ರಾಜೀವ್ ಕಣ್ಕಲ್, ಕುಶಾಲಪ್ಪ ಗೌಡ ಪಂಡಿ, ಲೋಕೇಶ್ ಕಟ್ಟ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.