ಸುಳ್ಯ:ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರ ಬಳಗ ಕಾಯರ್ತೋಡಿ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತಾಲೂಕು ಮಟ್ಟದ ಬಲೀಂದ್ರ ಅಲಂಕಾರ ಸ್ಪರ್ಧೆ ಹಾಗೂ ಗೂಡು ದೀಪ ಸ್ಪರ್ಧೆಯು ಕಾಯರ್ತೋಡಿ ವಠಾರದಲ್ಲಿ ನಡೆಯಿತು.ಬಲೀಂದ್ರ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಗೋವಿಂದ ನಾಯ್ಕ್ ದುಗ್ಗಲಡ್ಕ, ದ್ವಿತೀಯ ದೇವಿಪ್ರಸಾದ್ ಕುದ್ಪಾಜೆ, ತೃತೀಯ ಶಿವರಾಮ ನಾಯ್ಕ್ ಕೇರ್ಪಳ ರವರು ಪಡೆದುಕೊಂಡರು. ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೀಪಕ್ ಕಾಯರ್ತೋಡಿ, ದ್ವಿತೀಯ ಸಂದೇಶ್ ರಾವ್ ಕಾಯರ್ತೋಡಿ, ತೃತೀಯ ವಸಂತ್ ಆಚಾರ್ಯ ಕಾಯರ್ತೋಡಿಯವರು ಪಡೆದುಕೊಂಡರು. ಮಿತ್ರ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಪೂರ್ವಾಧ್ಯಕ್ಷರು ಸಹಕರಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
previous post