ಬಾಳಿಲ: ಹಿಂದೂ ಸಂಗಮ ಬಾಳಿಲ ಮಂಡಲ ಆಶ್ರಯದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಬಾಳಿಲದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಭೌದಿಕ್ ಪ್ರಮುಖರಾದ ಮುರಳೀಕೃಷ್ಣ ಉಡುಪಿ ದಿಕ್ಸೂಚಿ ಭಾಷಣ ಮಾಡಿದರು.ಶ್ರೀ ನಾಗಧರ್ಮೇಂದ್ರ ವೇದ ಸಂಜೀವಿನಿ ಪಾಠಾಶಾಲೆ ಆನೆಗುಂದಿ ಮಠ ಉಡುಪಿ ಇಲ್ಲಿಯ ಪ್ರಾಚಾರ್ಯರಾದ ಮೌನೇಶ್ ಶರ್ಮ ಆಧ್ಯಾತ್ಮಿಕ ಉಪನ್ಯಾಸ ನೀಡಿದರು.ವೇದಿಕೆಯಲ್ಲಿ
ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಹಾಗೂ ಪ್ರಧಾನ ಗೌರವ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಕಾಂಚೋಡು ಪರಮೇಶ್ವರಯ್ಯ, ನಿವೃತ್ತ ಶಿಕ್ಷಕರುಗಳಾದ ಭಾಸ್ಕರ ರಾವ್ ಬಾಳಿಲ, ರಘುನಾಥ ಕಾಯಾರ, ಕೃಷಿಕರಾದ ಚಂದ್ರಹಾಸ ರೈ ಅಗಲ್ಪಾಡಿ, ಕೆ.ಎನ್. ಪರಮೇಶ್ವರ ಕಲ್ಮಡ್ಕ, ಓಬಯ್ಯ ನಾಯ್ಕ ಮಾಳಪ್ಪಮಕ್ಕಿ, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಬೆಳ್ಳಾರೆ ಪಿ.ಹೆಚ್.ಸಿ. ನಿವೃತ್ತ ಸಿಬ್ಬಂದಿ ಬೇಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಸುಧಾಕರ ರೈ ಎ.ಎಂ. ಸ್ವಾಗತಿಸಿ, ಬಿಜೆಪಿ ಮಂಡಲ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ ವಂದಿಸಿದರು. ರಾಮ್ ಪ್ರಸಾದ್ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ಸೃಜನ್ ಕೆ.ವಿ. ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು, ಹಿಂದೂ ಬಾಧವರು ಭಾಗವಹಿಸಿದ್ದರು.












