ಸುಳ್ಯ:ಸಮರ್ಪಣೆ, ತ್ಯಾಗ, ಸಹನೆ ಶಾಂತಿಯ ದ್ಯೋತಕವಾದ
ಬಕ್ರೀದ್ ಹಬ್ಬವನ್ನು ಸುಳ್ಯ ತಾಲೂಕಿನಾದ್ಯoತ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.ಮುಸ್ಲಿಂ ಬಾಂಧವರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಸಂದೇಶ ಆಲಿಸಿ, ಪರಸ್ಪರ ಶುಭಾಶಯ ಕೋರಿದರು.
ಗಾಂಧಿನಗರ ಕೇಂದ್ರ ಜುಮಾ ಮಸೀದಿ:
ಸುಳ್ಯಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಪ್ರಾರ್ಥನೆಗೆ
ನೇತೃತ್ವ ವಹಿಸಿದರು. ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫಾ, ಪದಾಧಿಕಾರಿಗಳಾದ ಹಾಜಿ ಮಹಮ್ಮದ್ ಕೆಎಂಸ್, ಕೆ. ಬಿ. ಅಬ್ದುಲ್ ಮಜೀದ್, ಮುಹಿಯದ್ದೀನ್ ಫ್ಯಾನ್ಸಿ, ಹಮೀದ್ ಬೀಜಕೊಚ್ಚಿ, ಜಿ. ಎಂ. ಇಬ್ರಾಹಿಂ, ಎಸ್. ಎಂ. ಹಮೀದ್, ಹಾಜಿ ಎಸ. ಎ. ಹಮೀದ್, ಖಾದರ್ ಅಜಾದ್, ಇಸ್ಮಾಯಿಲ್ ಹಾಜಿ, ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಕಾರ್ಯದರ್ಶಿ ಲತೀಫ್ ಹರ್ಲಡ್ಕ, ನಗರಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಸದಸ್ಯರುಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಅನ್ಸಾರಿಯ ಸೆಂಟರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ ಮೊದಲಾವರು ಉಪಸ್ಥಿತರಿದ್ದರು .
ಪೇರಡ್ಕ ಜುಮಾ ಮಸೀದಿ:
ಪೇರಡ್ಕ ಮೊಹಿಯದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಿಸಲಾಯಿತು. ಖತೀಬರಾದ ರಿಯಾಝ್ ಫೈಝಿ ನೇತೃತ್ವ ವಹಿಸಿದ್ದರು. ನಮಾಝಿನ ಬಳಿಕ ಮಖಾಂ ಝಿಯಾರತ್ ಕೂಟು ಪ್ರಾರ್ಥನೆ ನಡೆಯಿತು ತೆಕ್ಕಿಲ್ ಪ್ರತಿಷ್ಠಾನದ ಅದ್ಯಕ್ಷ ಟಿ.ಎಂ ಶಹೀದ್, ಜಮಾಅತ್ ಅಧ್ಯಕ್ಷರ ಆಲಿ ಹಾಜಿ, ಕಾರ್ಯದರ್ಶಿ ಪಿ ಕೆ ಉಮ್ಮರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ ಹಮೀದ್,ಪಾಂಡಿ ಅಬ್ಬಾಸ್,ಇಬ್ರಾಹಿಂ ಹಾಜಿ ಕರಾವಳಿ, ಟಿ ಬಿ ಹನೀಫ್, ರಝಾಕ್ ಹಾಜಿ, ಸಾಜಿದ್ ಅಝ್ಹರಿ, ಸಾದುಮಾನ್ ತೆಕ್ಕಿಲ್ ಜುನೈದ್ ತೆಕ್ಕಿಲ್ ಎಂ ಆರ್ ಡಿ ಎ ಖಾದರ್ ಮೊಟ್ಟೆಂಗಾರ್ ಹಾಗೂ ಮುನೀರ್ ದಾರಿಮಿ ಉಪಸ್ಥಿತರಿದ್ದರು.
ಅರಂತೋಡು:
ಅರಂತೋಡಿನಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಭಾಂದವರು ಸಂಭ್ರಮದಿಂದ ಆಚರಿಸದರು,ಅರಂತೋಡು ಜುಮಾ ಮಸೀದಿಯಲ್ಲಿ ಖತೀಬ್ ಇಸಾಕ್ ಬಾಖವಿ ಯವರ ನೇತೃತ್ವ ದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು. ಈದ್ ಸಂದೇಶ ನೀಡಿದರು
ಕುಂಬರ್ಚೋಡು:
ಮೋಹಿಯದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.ಮಸೀದಿಯ ಖತಿಬರಾದ
ಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ
ಮಾತನಾಡಿ ಬಕ್ರೀದ್ ಹಬ್ಬದ ಸಂದೇಶವನ್ನು ನೀಡಿದರು
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಹಾಜಿ ಹನೀಫ್ ಕೆಎಂ ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಂ
ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ,
ಸಿದ್ದಿಕ್ ಹುದವಿ ಸಯ್ಯದ್ ಇಸ್ಮಾಹಿಲ್ ಅಡ್ಕರ್
ಅಬ್ದುಲ್ ಖಾದರ್ ಹಾಜಿ ಹಾಗೂ ಜಮಾಯತಿನ ಸದಸ್ಯರು ಪಾಲ್ಗೊಂಡರು.