ಸುಳ್ಯ:ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿಸೆಂಬರ್ 21 ಮತ್ತು 22ರಂದು ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕ್ಷೇತ್ರದಲ್ಲಿ ನಡೆಯಿತು.
ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆಯವರ ಅಧ್ಯಕ್ಷತೆಯಲ್ಲಿ ನಡೆದ
ಕಾರ್ಯಕ್ರಮದಲ್ಲಿ, ಹಿರಿಯರಾದ, ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡರು ಆಮಂತ್ರಣ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಅಂಬ್ರೋಟಿ ಮುಚ್ಚಿರಡಿ ದೈವಸ್ಥಾನದ ಪ್ರಮುಖರಾದ ಲಕ್ಷ್ಮಣ ಗೌಡ ಕುಕ್ಕೆಟ್ಟಿ, ಅತ್ಯಾಡಿ ದೈವಸ್ಥಾನದ ಚೆನ್ನಪ್ಪ ಗೌಡ ಅತ್ಯಾಡಿ,ನಾರಾಲು ದೈವಸ್ಥಾನದ ಪರವಾರಗಿ
ಉಮೇಶ ನಾರಾಲು, ಕರ್ಲಪ್ಪಾಡಿ ಕ್ಷೇತ್ರದ ಪರವಾಗಿ ರೂಪಾನಂದ ಕರ್ಲಪ್ಪಾಡಿ ಶುಭ ಹಾರೈಸಿದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದರು. ತೀರ್ಥೇಶ್ ಬಲಂದೋಟಿ ವಂದಿಸಿದರು. ಮಂಜುನಾಥ್ ಪೇರಾಲು ಪರಪ್ಪು ಕಾರ್ಯಕ್ರಮ ನಿರೂಪಿಸಿದರು.ಪ್ರತೀ ಮನೆಗೆ ಆಮಂತ್ರಣ ತಲುಪಿಸಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಆಮಂತ್ರಣ ಬಿಡುಗಡೆಗೂ ಮುನ್ನ ದೈವಸ್ಥಾನದ ಮುಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಜಪ್ಪಿಲ ಕ್ಷೇತ್ರಕ್ಕೊಳಪಟ್ಟ ಪ್ರಮುಖರು, ಊರವರು ಸಭೆಯಲ್ಲಿದ್ದರು.