ಸುಳ್ಯ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮಗಾರಿ ನಡೆಯತ್ತಿದ್ದು ಇದರ ಆಳಿಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ವಿವರ ಪಡೆದರು. ಸುಳ್ಯ ತಾಲೂಕಿನಲ್ಲಿ ಅನುಷ್ಠಾನ ಮಾಡುವ ಕುರಿತ ವರದಿಗಳನ್ನು ಪಡೆದರು. ನರಿಕೊಂಬುವಿನಲ್ಲಿ ಕಾಮಗಾರಿ ಹಂತದಲ್ಲಿರುವ ಯೋಜನೆಯನ್ನು
ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಪಾಣೆಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ಲ್ಯಾಂಟ್ ವೀಕ್ಷಣೆ, ನರಿಕೊಂಬುವಿನಲ್ಲಿ ಕಾರ್ಯಚರಿಸುತ್ತಿರುವ ಟ್ರಿಟ್ ಮೆಂಟ್ ಪ್ಲ್ಯಾಂಟ್, ಶಂಬೂರಿನಲ್ಲಿ ಜ್ಯಾಕ್ ವೆಲ್ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಎಸ್,ಎನ್, ಮನ್ಮಥ, ಐವರ್ನಾಡು ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಪ್ರಮುಖರಾದ ಶೀನಾಥ್ ಬಾಳಿಲ,
ಪದ್ಮನಾಭ ಬೀಡು ಹಾಗೂ ಗ್ರಾಮೀಣ ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಾದ ಬಂಟ್ವಾಳ ಉಪವಿಭಾಗ ಎಇಇ ನಟೇಶ, ಎಇ ಜಗದೀಶ , ಎಇ ನಾಸಿರ್, ಸುಳ್ಯ ಉಪವಿಭಾಗ ಎಇಇ ಚೈತ್ರ, ಎಇ ಮಣಿಕಂಠ ಮತ್ತು ಎಇ ಜನಾರ್ದನ, ಗುತ್ತಿಗೆ ಪಡೆದ ಶಂಕರನಾರಾಯಣ ಕಂಪನಿಯ ಪ್ರಾಜೆಕ್ಟ್ ಮ್ಯಾನೆಜರ್ ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು.