ಸಂಪಾಜೆ: ಸಂಪಾಜೆ ಗ್ರಾಮಕ್ಕೆ ನೂತನ ಶಾಸಕಿ ಭಾಗೀರಥಿ ಮುರುಳ್ಯ ಗುರುವಾರ ಭೇಟಿ ನೀಡಿದರು. ಕಳೆದ ವರ್ಷ ನೆರೆ ಪ್ರವಾಹದಿಂದ ಸುತ್ತಮುತ್ತಲಿನ ಅನೇಕ ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ಹಾನಿಯಿಂದ ಬಾರಿ ನಷ್ಟ ಉಂಟಾಗಿತ್ತು. ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಅವರು ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಹಾಗೂ ನದಿಯ ಹೂಳೆತ್ತುವ ಬಗ್ಗೆ
ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ, ಮಹೇಶ್ ಕುಮಾರ್ ಮೇನಾಲ, ಗೀತಾ ಶೇಖರ್, ಸ್ಥಳೀಯರಾದ ಎಸ್ ಪಿ ಲೋಕನಾಥ, ಕೇಶವ ಬಂಗ್ಲಗುಡ್ಡೆ, ಶಾಜಿ ಮಾಧವನ್, ನಾಗೇಶ್ ಬಾಚಿಗದ್ದೆ, ವಿಜಯ ಅಲಡ್ಕ, ರಾಮಚಂದ್ರ ಕಲ್ಲಗದ್ದೆ, ರಜನಿ ಶರತ್, ಜಗದೀಶ್ ಪಿ ಎಲ್, ವರದರಾಜ್,ಗಣಪತಿ ಭಟ್, ಚಂದ್ರಶೇಖರ , ಶಾವಿನ್ ಬಂಗ್ಲಗುಡ್ಡೆ, ರವಿ, ಚಂದ್ರಶೇಖರ ಕೈಪಡ್ಕ, ರವಿಶಂಕರ್ ಭಟ್, ನಾರಾಯಣ ಭಟ್, ಪ್ರಶಾಂತ್, ಜಗದೀಶ್ ಪಿ ಎಲ್, ಕುಂಞಿಕಣ್ಣ ಮಣಿಯಾಣಿ, ಭಾರತೀ ಬಾಚಿಗದ್ದೆ, ತ್ರಿವೇಣಿ ಬಾಚಿಗದ್ದೆ, ಪುಷ್ಪರಾಜ್ ಗಂಭೀರ, ರಂಜನ್ ಕಲ್ಲಗದ್ದೆ, ಮಂಜುನಾಥ್ ಕೆ ವಿ, ಪುರುಷೋತ್ತಮ ಕೈಪಡ್ಕ, ಅಶೋಕ್ ಕೈಪಡ್ಕ, ದೀಪಕ್ ರೈ ಕೈಪಡ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಶಾಸಕಿಗೆ ಅಭಿನಂದನೆ:
ಸಂಪಾಜೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಸಭೆ ನಡೆಸಿ ಅಭಿನಂದಿಸಿ, ಸನ್ಮಾನಿಸಿದರು.