ಸುಳ್ಯ:ಬೂಡು-ಕೇರ್ಪಳ- ಕುರುಂಜಿಗುಡ್ಡೆ ಭಾಗದಲ್ಲಿ ಕ್ರಿಯಾಶೀಲರಾಗಿರುವ ಶ್ರೀ ಭಗವತಿ ಯುವ ಸೇವಾ ಸಂಘದ ಅದ್ದೂರಿ ಬೆಳ್ಳಿ ಹಬ್ಬ ಸಮಾರಂಭ ‘ಶ್ರೀಭಗವತಿ ರಜತೋತ್ಸವ’ ಮಾ.28 ಮತ್ತು 29ರಂದು ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ನಡೆಯಲಿದೆ.ಯುವ ಸೇವಾ ಸಂಘವು 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ
ಬಂಟರ ಯಾನೆ ನಾಡವರ ಸಂಘ ಸುಳ್ಯ ತಾಲೂಕು ಇದರ ಸಹಕಾರದೊಂದಿಗೆ ನಡೆಯುವ
ಎರಡು ದಿನಗಳ ಅದ್ದೂರಿ ಬೆಳ್ಳಿಹಬ್ಬದ ಆಚರಣೆ ಪ್ರಯುಕ್ತ ಸಾಧಕರಿಗೆ ಸನ್ಮಾನ, ಭಗವತಿ ರತ್ನ ಭೂಷಣ ಪ್ರಶಸ್ತಿ ಪ್ರದಾನ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ಮಾ.28 ಶನಿವಾರ ಸಂಜೆ 6ರಿಂದ ಉದ್ಘಾಟನಾ ಸಮಾರಂಭ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಶ್ರೀ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕೇರ್ಪಳ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶ್ರೀ ಭಗವತಿ ರಜತೋತ್ಸವ ಉದ್ಘಾಟಿಸುವರು.
ಶಾಸಕಿ ಭಾಗೀರಥಿ ಮುರುಳ್ಯ, ಸಾಧಕರನ್ನು ಸನ್ಮಾನಿಸುವರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಹಾಗು ಎ.ಒ.ಎಲ್.ಇ ಕಮಿಟಿ ಬಿ ಅಧ್ಯಕ್ಷ ಡಾ.ಕೆ.ವಿ. ರೇಣುಕಾಪ್ರಸಾದ್ ಅವರು ಶ್ರೀ ಭಗವತಿ ರತ್ನ ಭೂಷಣ ಪ್ರಶಸ್ತಿ ಪ್ರದಾನ ಮಾಡುವರು. ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಮಾಜಿ ಅಧ್ಯಕ್ಷರನ್ನು ಸನ್ಮಾನಿಸುವರು.ಮುಖ್ಯ ಅತಿಥಿಗಳಾಗಿ

ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ., ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ
ಡಾ. ಹರಪ್ರಸಾದ್ ತುದಿಯಡ್ಕ,ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಗೌರವಾಧ್ಯಕ್ಷ ಎನ್. ಜಯಪ್ರಕಾಶ್ ರೈ,
ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಸಾರ್ವಜನಿಕ ಶ್ರೀ ಶಾರದಾಂವಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಶಾರದಾಂಬಾ ಉತ್ಸವ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಗಾಯ, ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ ತೋಟ,
ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, ಸಿಎ ಬ್ಯಾಂಕ್ ನಿರ್ದೇಶಕ ಎನ್.ಎ. ರಾಮಚಂದ್ರ, ಶ್ರೀ ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣರೈ, ಸ್ಥಾಪಕಾಧ್ಯಕ್ಷ ಸದಾಶಿವ ಕೆ. (ಮೆಸ್ಕಾಂ),ಮಾಜಿ ಅಧ್ಯಕ್ಷ ಶಿವರಾಮ ಕೇರ್ಪಳ, (ಕೆ.ವಿ.ಜಿ.ಪಿ.), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ನಿವೃತ್ತ ಅಧಿಕಾರಿ ಜನಾರ್ಧನ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಅಧ್ಯಕ್ಷ
ವಿನ್ಯಾಸ್ ಕುರುಂಜಿ, ಬೂಡು ಕಾಲನಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು ಭಾಗವಹಿಸಲಿದ್ದಾರೆ.
ಸನ್ಮಾನ- ಪ್ರಶಸ್ತಿ:
ಸಮಾರಂಭದಲ್ಲಿ ಸುಳ್ಯ ಸಾರ್ವಜನಿಕ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಶ್ರೀ ಚೆನ್ನಕೇಶವ ದೇವಸ್ಥಾನದ
ಪ್ರಧಾನ ಅರ್ಚಕ ಹರಿಕೃಷ್ಣ ವರಂಬಳಿತ್ತಾಯ,ರಕ್ತದಾನಿ
ಶರತ್ ಪರಿವಾರಕಾನ,ಹಿರಿಯ ದೈವ ನರ್ತಕ ಮಾಯಿಲ ಅಜಿಲ,ಪ್ರಗತಿ ಅಂಬ್ಯುಲನ್ಸ್ನ ಚಾಲಕ ಅಬ್ದುಲ್ ರಜಾಕ್ (ಅಚ್ಚು),ಹಿರಿಯ ಯಕ್ಷಗಾನ ಪೋಷಕರು ಮತ್ತು ಕಲಾವಿದ ಬಾಲಣ್ಣ ಗೌಡ ಕಾಪಿಲ, ಕೇರ್ಪಳ, ನಿವೃತ್ತ ಅಂಗನವಾಡಿ ಸಹಾಯಕಿ ಕುಸುಮಾವತಿ,ವಾಲಿಬಾಲ್ ಆಟಗಾರ ವಿಪುಲ್ ರೈ ಬೂಡು,ಅವರನ್ನು ಸನ್ಮಾನಿಸಲಾಗುವುದು.ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಸ್ಪಂದನ ಗೆಳೆಯರ ಬಳಗ ಅಡ್ತಲೆ, ಅರಂತೋಡು,
ಮಿತ್ರ ಬಳಗ ಕಾಯರ್ತೋಡಿ ಸಂಘಟನೆಗಳಿಗೆ 2025-26ನೇ ಸಾಲಿನ ಶ್ರೀ ಭಗವತಿ ರತ್ನ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಸಂಭ್ರಮ:
ಎರಡು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ಎರ್ಪಡಿಸಲಾಗಿದೆ.ಮಾ.28ರಂದು ರಾತ್ರಿ 7.30ರಿಂದ ಬೂಡು ಕಿಶೋರ್ ಕುಮಾರ್ ಶೆಟ್ಟಿ ನೇತೃತ್ವದ ಖ್ಯಾತ ನೃತ್ಯ ತಂಡ ಎಕ್ಸ್ ಟೆಸಿ ವತಿಯಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ. ರಾತ್ರಿ 8.30ರಿಂದ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನವೈಭವ. ಮಾ.29 ಆದಿತ್ಯವಾರ ಸಂಜೆ 5.30ರಿಂದ ಆರ್ಯನ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಪಡೆದ ಗಾಯಕ- ಗಾಯಕಿಯರಿಂದ ಅದ್ದೂರಿಯ ಸಂಗೀತ ರಸಮಂಜರಿ.ರಾತ್ರಿ 8.30 ರಿಂದ ಜನ ಮೆಚ್ಚಿದ ನಾಟಕ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ರಂಗ್ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ, ‘ತುಳುನಾಡ ಕಲಾಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ‘ಮಂಗಳೂರು ಮೀನನಾಥ’ ರಾಘವೇಂದ್ರ ರೈ ಅಭಿನಯದಲ್ಲಿ, ತುಳು ಹಾಸ್ಯಮಯ ನಾಟಕ ‘ಜಗತ್ತೇ ಶೂನ್ಯ ಸ್ವಾಮಿ’ ಪ್ರದರ್ಶನಗೊಳ್ಳಲಿದೆ ಎಂದು
ಶ್ರೀ ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕೇರ್ಪಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.














