ಸುಳ್ಯ:ಸುಳ್ಯದ ಬೂಡು – ಕೇರ್ಪಳ – ಕುರುಂಜಿಗುಡ್ಡೆ ವ್ಯಾಪ್ತಿಯನ್ನೊಳಗೊಂಡಿರುವ ಶ್ರೀ ಭಗವತೀ ಯುವ ಸೇವಾ ಸಂಘ 25ವರ್ಷಗಳನ್ನು ಪೂರ್ಣಗೊಳಿಸಿದ್ದು ಅದರ ನೆನಪಿಗಾಗಿ ಮಾ.28ಮತ್ತು 29ರಂದು ಶ್ರೀ ಭಗವತಿ ರಜತೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು
ಫೆ.22ರಂದು ಬೂಡು ಭಗವತೀ ಕ್ಷೇತ್ರದಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ ಅವರು ಆಮಂತ್ರಣ ಬಿಡುಗಡೆಗೊಳಿಸಿ,“ಸಮಾಜ ಸೇವೆಯಿಲ್ಲಿ ತೊಡಗಿಸಿಕೊಂಡಿರುವ ಭಗವತೀ ಯುವ ಸೇವಾ ಸಂಘ ರಜತೋತ್ಸವ ಆಚರಿಸುತ್ತಿದ್ದು ಎಲ್ಲರೂ ಭಾಗವಹಿಸಿ ಸಹಕಾರ ನೀಡಬೇಕು ಎಂದು ಹೇಳಿದರು.
ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕೇರ್ಪಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಗವತೀ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಶಿವರಾಮ ಕೇರ್ಪಳ (ಕೆ.ವಿ.ಜಿ.ಪಿ.), ಉದ್ಯಮಿ ರಮೇಶ್ ಶೆಟ್ಟಿ ಬೂಡು, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಜನಾರ್ದನ ನಾಯ್ಕ್ ಕೇರ್ಪಳ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಶಿವಪ್ರಸಾದ್ ಕೇರ್ಪಳ, ನಿವೃತ್ತ ಶಿಕ್ಷಕಿ ಮೀನಾಕ್ಷಿ ವೇದಿಕೆಯಲ್ಲಿದ್ದರು.
ಭಗವತೀ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಪ್ರಾಸ್ತಾವಿಕ ಮಾತನಾಡಿದರು. ಪೂರ್ವಾಧ್ಯಕ್ಷ ವಾಸುದೇವ ನಾಯಕ್ ಅಂಗಡಿಮಠ ಸ್ವಾಗತಿಸಿದರು. ಬೂಡು ಕುಸುಮಾಧರ ರೈ ಕಾರ್ಯಕ್ರಮ ನಿರ್ವಹಿಸಿದರು. ಜಯಂತ್ ಕೇರ್ಪಳ ವಂದಿಸಿದರು.






