ಸುಳ್ಯ:ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಬಡ್ಡಡ್ಕದಿಂದ ಕೇರಳ ಗಡಿ ಬಾಟೋಳಿ ತನಕ ಕರ್ನಾಟಕದ ಭಾಗದ ರಸ್ತೆಯ ಮರು ಡಾಮರೀಕರಣ ಕಾಮಗಾರಿ ನಾಳೆ(ಮಾ.1 ಶನಿವಾರ) ನಡೆಯಲಿದೆ. ಈ ಹಿನ್ನಲೆಯಲ್ಲಿ ರಸ್ತೆಯಲ್ಲಿ ಬಡ್ಡಡ್ಕದಿಂದ ಬಾಟೋಳಿ ತನಕ ರಸ್ತೆಯಲ್ಲಿ
ವಾಹನ ಸಂಚಾರವನ್ನು ಸ್ಥಗಿತ ಮಾಡಲಾಗುತ್ತದೆ.
ಬೆಳಗ್ಗೆ 08 ರಿಂದ ರಸ್ತೆ ರಾತ್ರಿ 8 ಗಂಟೆಯ ತನಕ ಮರು ಡಾಮರೀಕರಣ ಕಾರ್ಯ ನಡೆಯಲಿದೆ ಎಂದು ಗುತ್ತಿಗೆದಾರರಾದ ನಾರಾಯಣ ಕೇಕಡ್ಕ ತಿಳಿಸಿದ್ದಾರೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಬಡ್ಡಡ್ಕದಿಂದ ಬಾಟೋಳಿ ತನಕ ಸುಮಾರು ಒಂದೂವರೆ ಕಿ.ಮಿ.ರಸ್ತೆ 6 ವರ್ಷದ ಹಿಂದೆ ಅಭಿವೃದ್ಧಿ ಮಾಡಲಾಗಿತ್ತು. ಅದೇ ಕಾಮಗಾರಿಯ ಮುಂದುವರಿದ ಭಾಗವಾಗಿ ಇದೀಗ ಮರು ಡಾಮರೀಕರಣ ನಡೆಯಲಿದೆ.