ಬಾಳಿಲ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 26ರಿಂದ ಆರಂಭಗೊಂಡಿದ್ದು ಜ. 29ರ ವರೆಗೆ ವಿಜೃಂಭಣೆಯಿಂದ ಜರಗಲಿದೆ. ಈ ಪ್ರಯುಕ್ತ ವಿಜ್ರಂಭಣೆಯ ಹಸಿರುವಾಣಿ ಸಮರ್ಪಣೆ ನಡೆಯಿತು. ಸಂಜೆ ಬಾಳಿಲ ಶ್ರೀ ಮಂಜುನಾಥೇಶ್ವರ ದ್ವಾರದ
ಬಳಿಯಿಂದ ಮೂರುಕಲ್ಲಡ್ಕ ಶ್ರೀ ಉಳ್ಳಾಕುಲು ಸ್ಥಾನದವರೆಗೆ ಹಸಿರುವಾಣಿ ಮೆರವಣಿಗೆ ನಡೆಯಿತು. ಹತ್ತಾರು ವಾಹನಗಳಲ್ಲಿ ಹಸಿರು ವಾಣಿಯನ್ನು ಮೆರವಣಿಗೆಯಲ್ಲಿ ತಂದು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ
ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ ಅವರು ತೆಂಗಿನ ಕಾಯಿ ಒಡೆದು, ದೀಪ ಬೆಳಗಿ ಮೆರವಣಿಗೆಗೆ ಚಾಲನೆ ನೀಡಿದರು.

ಸೇವಾ ಸಮಿತಿ ಗೌರವಾಧ್ಯಕ್ಷರೂ ವಿಶ್ವಸ್ಥರೂ ಆದ ಬಾಳಿಲ ಸುಬ್ರಾಯ ಅಡಿಕೆಹಿತ್ತು ವಿಶ್ವಸ್ಥರಾದ ಎನ್. ವಿಶ್ವನಾಥ ರೈ ಕಳಂಜಗುತ್ತು, ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ
ಗೌಡ ತೋಟದಮೂಲೆ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ, ಸದಸ್ಯರಾದ ಕೂಸಪ್ಪ ಗೌಡ ಮುಗುಪ್ಪು, ಗಂಗಾಧರ ತೋಟದಮೂಲೆ, ಜಾತ್ರೋತ್ಸವ ಸಮಿತಿ 2024 ಗೌರವಾಧ್ಯಕ್ಷ ಸಪ್ತಗಿರಿ ಪುರಂದರ ಗೌಡ, ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯದರ್ಶಿ ಕುಶಾಲಪ್ಪ ಗೌಡ ಬಿ ಮಣಿಮಜಲು, ಉಪಾಧ್ಯಕ್ಷ ಪುರುಷೋತ್ತಮ ತಂಟೆಪ್ಪಾಡಿ ಜೊತೆ ಕಾರ್ಯದರ್ಶಿ ಕೌಶಿಕ್ ಕೊಡಪಾಲ, ಮಾರ್ಗದರ್ಶಕರಾದ ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ. ಬಾಳಿಲ ರಾಮಚಂದ್ರ ರಾವ್, ರುಕ್ಷಯ್ಯ ಗೌಡ ಕಳಂಜ, ಅಚ್ಚುತ ಗೌಡ ಬಾಳಿಲ, ರಾಮ್ ಪ್ರಸಾದ್ ಕಾಂಚೋಡು, ವಿವಿಧ ಸಮಿತಿ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂದು ಬೆಳಿಗ್ಗೆ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸನ್ನಿಧಿಯಲ್ಲಿ ಗಣಪತಿ ಹವನ, ನಾಗತಂಬಿಲ, ವಿಶೇಷ ತಂಬಿಲ ನಡೆಯಿತು.
ಬಳಿಕ ಮೂರುಕಲ್ಲಡ್ಕದಲ್ಲಿ ನಾಗತಂಬಿಲ, ಅನ್ನ ಸಂತರ್ಪಣೆ ನಡೆಯಿತು.









