ಬಾಳಿಲ:ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವದ ಅಂಗವಾಗಿ ಜ. ಜ. 28ರಂದು ಧಾರ್ಮಿಕ ಸಭೆ ನಡೆಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಅಧ್ಯಾಪಕರಾದ ಸದಾಶಿವ ಭಟ್ ಜೋಗಿಬೆಟ್ಟು ಧಾರ್ಮಿಕ ಉಪನ್ಯಾಸ ನೀಡಿದರು. ಅತಿಥಿಗಳಾಗಿ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕಳಂಜ ಬಾಳಿಲ ಪ್ರಾ.ಕೃ.ಪ. ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಭಾಗವಹಿಸಿದ್ದರು.ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಗೌರವಾಧ್ಯಕ್ಷರೂ ವಿಶ್ವಸ್ಥರೂ ಆದ ಬಾಳಿಲ ಸುಬ್ರಾಯ ಅಡಿಕೆಹಿತ್ತು ವಿಶ್ವಸ್ಥರಾದ ಎನ್. ವಿಶ್ವನಾಥ ರೈ ಕಳಂಜಗುತ್ತು, ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ, ಸದಸ್ಯರಾದ

ಕೂಸಪ್ಪ ಗೌಡ ಮುಗುಪ್ಪು, ಗಂಗಾಧರ ತೋಟದಮೂಲೆ, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಸಪ್ತಗಿರಿ ಪುರಂದರ ಗೌಡ, ಕಾರ್ಯಾಧ್ಯಕ್ಷ ಚಂದ್ರಶೇಖರ ರೈ ಬಜನಿ, ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯದರ್ಶಿ ಕುಶಾಲಪ್ಪ ಗೌಡ ಬಿ ಮಣಿಮಜಲು, ಉಪಾಧ್ಯಕ್ಷ ಪುರುಷೋತ್ತಮ ತಂಟೆಪ್ಪಾಡಿ ಜೊತೆ ಕಾರ್ಯದರ್ಶಿ ಕೌಶಿಕ್ ಕೊಡಪಾಲ, ಮಾರ್ಗದರ್ಶಕರಾದ ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ. ಬಾಳಿಲ ರಾಮಚಂದ್ರ ರಾವ್, ರುಕ್ಷಯ್ಯ ಗೌಡ ಕಳಂಜ, ಅಚ್ಚುತ ಗೌಡ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು. ರಾಮ್ ಪ್ರಸಾದ್ ಕಾಂಚೋಡು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ ವಂದಿಸಿದರು. ಪ್ರಶಾಂತ್ ಕಿಲಂಗೋಡಿ ವಂದಿಸಿದರು.

ನೇಮೋತ್ಸವ:
ಬೆಳಿಗ್ಗೆ ಮೂರುಕಲ್ಲಡ್ಕ ದೈವಸ್ಥಾನದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಸಪರಿವಾರ ದೈವಗಳ ಕಿರುವಾಲು, ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಟು ಮೂರುಕಲ್ಲಡ್ಕದಲ್ಲಿ ಏಕತ್ರಗೊಂಡು ಕಲ್ಲಮಾಡಕ್ಕೆ ಆಗಮಿಸಿತು. ಬಳಿಕ ಅಯ್ಯನಕಟ್ಟೆ ಕಲ್ಲಮಾಡದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ನೇಮೋತ್ಸವ ನಡೆಯಿತು. ನೇಮ ನಡೆದು ಬಳಿಕ ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆಯಾಯಿತು.ಬಳಿಕ ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ನೇಮ, ಬೂಳ್ಯ ವಿತರಣೆ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಿತು. ರಾತ್ರಿ ಪ್ರಸಿದ್ದ ಕಲಾವಿದರ ಕೊಡುವಿಕೆಯಲ್ಲಿ ಯಕ್ಷಗಾನ ಬಯಲಾಟ ‘ಮರ್ಯಾದಾ ಪುರುಷೋತ್ತಮ’ ನಡೆಯಿತು.














