ಸುಳ್ಯ:ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರವು ಉಚಿತ, ಪೂರ್ಣ-ಶ್ರೇಣಿಯ ಆರೋಗ್ಯ ಸೇವೆಗಳನ್ನು ಕಳೆದ ಕೆಲ ವರ್ಷಗಳಿಂದ ಪ್ರಾರಂಭಿಸಿದ್ದು, ಎಲ್ಲಾ ಗ್ರಾಮಗಳಲ್ಲಿ ಸರಕಾರಿ ಕಟ್ಟಡ ಅಥವಾ ಖಾಸಗಿ ಕಟ್ಟಡಗಳನ್ನು
ಬಾಡಿಗೆ ಪಡೆದು, 1 ಸಿಬ್ಬಂದಿಯನ್ನು ನೇಮಿಸಿ, ಊರಿನ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ.ಆದರೆ ಇದೀಗ ಖಾಸಗಿ ಕಟ್ಟಡದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಬಾಡಿಗೆ ಬಾರದೆ 6 ತಿಂಗಳು ಕಳೆದಿದ್ದು, ಬಾಡಿಗೆ ಬಾರದೆ ಕಟ್ಟಡ ಮಾಲೀಕರು ಸಂಕಷ್ಟದಲ್ಲಿದ್ದು, ಕೂಡಲೇ ಬಾಡಿಗೆ ಪಾವತಿ ಮಾಡಬೇಕು ಎಂದು ಕಟ್ಟಡದ ಮಾಲಕರು ಆಗ್ರಹಿಸಿದ್ದಾರೆ. ಇದು ಮಾತ್ರವಲ್ಲದೆ, ಇಲ್ಲಿಯ ಸಿಬ್ಬಂದಿಯವರಿಗೆ ಕಳೆದ 10 ತಿಂಗಳ ಇನ್ಸೆಂಟಿವ್, ಸ್ಚಚ್ಚತಾ ಸಿಬ್ಬಂದಿಯ ಸಂಬಳವು ಪಾವತಿಯಾಗದೆ ಸಂಕಷ್ಟದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ಗಮನಹರಿಸಬೇಕಾಗಿದೆ ಎಂದು ಕಟ್ಟಡ ಬಾಡಿಗೆ ನೀಡಿರುವ ಮಾಲಕರು ಹೇಳುತ್ತಾರೆ.










