ಸುಳ್ಯ: ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ ಪದವಿ ಮಾರ್ಗದರ್ಶಕರ ಕಾರ್ಯಗಾರ ಜೂ.10ರಿಂದ 12ರ ತನಕ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಲಿದೆ.ಕಾರ್ಯಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಕೆ. ವಿ.ಚಿದಾನಂದ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಕಾರ್ಯದರ್ಶಿ ಹಾಗೂ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ಸ್ ಇದರ ಸೆನೆಟ್ ಸದಸ್ಯರಾದ ಡಾ.ಐಶ್ವರ್ಯ ಕೆ.ಸಿ ಮತ್ತು ಕಾಲೇಜು ಆಫ್ ಆಯುರ್ವೇದಿಕ್ ಸೈನ್ಸ್ ಮತ್ತು ರಿಸರ್ಚ್ ಇದರ ಪಂಚ ಕರ್ಮ ವಿಭಾಗದ ಮುಖ್ಯಸ್ಥರು ಹಾಗೂ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ಸ್ ಬೆಂಗಳೂರು ಇದರ ಬೋರ್ಡ್ ಆಫ್ ಸ್ಟಡೀಸ್ ಆಯುರ್ವೇದ ವಿಭಾಗದ ಚೆಯರ್ಮೆನ್ ಡಾ. ಗಣೇಶ್ ಪುತ್ತೂರು ಉಪಸ್ಥಿತರಿರುತ್ತಾರೆ. ಮೂರು ದಿನದ ಕಾರ್ಯಗಾರದಲ್ಲಿ ದೇಶದ ವಿವಿಧ ಆಯುಷ್ ಕಾಲೇಜುಗಳತರಬೇತುದಾರರು ಸ್ನಾತಕೋತ್ತರ ಪದವಿ ಮಾರ್ಗದರ್ಶಕರಿಗೆ “ಸೈನ್ಟಿಫಿಕ್ ರೈಟಿಂಗ್,
ರಿಸರ್ಚ್ ಇಂಟೆಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್”ನ ಕುರಿತು ತರಬೇತಿಯನ್ನು ನೀಡಲಿದ್ದಾರೆ.
ಜೂ.12ರಂದು ಕಾರ್ಯಗಾರದ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಕೆ. ವಿ.ಚಿದಾನಂದ ವಹಿಸಲಿದ್ದಾರೆ. ಅಥಿತಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ,ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಕಾರ್ಯದರ್ಶಿ ಹಾಗೂ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ಸ ಸೈನ್ಸ್ ಇದರ ಸೆನೆಟ್ ಸದಸ್ಯರಾದ ಡಾ. ಐಶ್ವರ್ಯ ಕೆ.ಸಿ. ಮತ್ತು ಕೆ. ವಿ. ಜಿ. ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ. ಸಿ ರಾಮಚಂದ್ರ ಭಟ್ ಅವರು ಉಪಸ್ಥಿತರಿರುವರು ಎಂದು ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.